ಚನ್ನಪಟ್ಟಣ: ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಗುರುವಾರ ಚಲಿಸುತ್ತಿದ್ದ ಬಸ್ನಲ್ಲಿ ಸೀಟು ಹಿಡಿಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಬಸ್ ಕೆಳಗೆ ಬಿದ್ಡಿದ್ದಾಳೆ. ಚಕ್ರದ ಅಡಿ ಸಿಲುಕಿ ಮಹಿಳೆ ಕೈ ಸಂಪೂರ್ಣ ಜಜ್ಜಿಹೋಗಿದೆ.

ಹೊನ್ನಾಯಕನಹಳ್ಳಿ ಗ್ರಾಮದ ಜಯಮ್ಮ(60) ಗಾಯಗೊಂಡಿದ್ದಾರೆ. ನಗರಕ್ಕೆ ಬಂದಿದ್ದ ಅವರು ಗ್ರಾಮಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಕೆಸ್ತೂರು ಮಾರ್ಗದ ಸರ್ಕಾರಿ ಬಸ್ನಲ್ಲಿ ಸೀಟು ಹಿಡಿಯಲು ಧಾವಿಸಿದ್ದರು. ಆಗ ಬಸ್ ಇನ್ನೂ ನಿಧಾನವಾಗಿ ಚಲಿಸುತ್ತಿತ್ತು. ಅವಸರದಲ್ಲಿದ್ದ ಮಹಿಳೆ ಆಯತಪ್ಪಿ ಜಾರಿ ಬಿದ್ದಿದ್ದಾರೆ. ಅವರ ಕೈ ಹಿಂಬದಿಯ ಚಕ್ರಕ್ಕೆ ಸಿಲುಕಿ ಜಜ್ಜಿಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡ ಮಹಿಳೆಯನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.