ಚನ್ನಪಟ್ಟಣ: ವಿನಾಶಕ್ಕೆ ದಾರಿಯಾಗುತ್ತಿರುವ ಇಸ್ರೇಲ್, ಅಮೆರಿಕಾ ಹಾಗೂ ಇರಾನ್ ನಡುವೆ ನಡೆವಿನ ಯುದ್ಧವನ್ನು ನಿಲ್ಲಿಸಲು ವಿಶ್ವಸಂಸ್ಥೆ ಮುಂದಾಗಬೇಕೆಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರದ ಸಾಮಾಜಿಕ ಚಿಂತಕರು ಗುರುವಾರ ರಾತ್ರಿ ನಗರದಲ್ಲಿ ಬಿತ್ತಿಪತ್ರಗಳು ಹಾಗೂ ಮೇಣದ ಬತ್ತಿ ಪ್ರದರ್ಶಿಸಿದರು.

ಮೂರು ರಾಷ್ಟ್ರಗಳ ನಡುವೆ ಪ್ರತಿಷ್ಠೆಗೆ ನಡೆಯುತ್ತಿರುವ ಈ ಯುದ್ಧದಿಂದ ವಿವಿಧ ವಲಯಗಳಲ್ಲಿ ವಸ್ತುಗಳ ಆಮದು, ರಫ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದು ಹತ್ತಾರು ರಾಷ್ಟ್ರಗಳ ಜನ ಬೆಲೆ ಏರಿಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುದ್ಧವನ್ನು ನಿಲ್ಲಿಸಿ ವಿನಾಶವನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಯುದ್ಧದ ಪರಿಣಾಮದಿಂದ ಒಂದೆಡೆ ಸಿಲಿಂಡರ್ ಪೂರೈಕೆ ಇಲ್ಲದೆ ಹೋಟೆಲ್ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಜೊತೆಗೆ ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಕೃಷಿ ಸೇರಿದಂತೆ ವಿವಿಧ ವಲಯಗಳಿಗೆ ಬೇರೆ ರಾಷ್ಟ್ರಗಳಿಂದ ಬರುತ್ತಿದ್ದ ಕಚ್ಚಾ ಪದಾರ್ಥಗಳು ಸ್ಥಗಿತವಾಗಿದೆ. ಇಂತಹ ನೂರಾರು ಸಮಸ್ಯೆಗಳಿಗೆ ಕಾರಣವಾಗಿರುವ ಯುದ್ಧವನ್ನು ನಿಲ್ಲಿಸಬೇಕೆಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಒತ್ತಾಯಿಸಿದರು.

ಕೆಪಿಸಿಸಿ ಸದಸ್ಯ ಪಿ. ರಮೇಶ್, ಮಹಿಳಾ ಹೋರಾಟಗಾರ್ತಿ ತಗಚಗೆರೆ ಸುಕನ್ಯ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಲೇಖಕ ಶ್ರೀನಿವಾಸ್ ರಾಂಪುರ, ಕವಯತ್ರಿ ಆಶಾಲತಾ, ಮುಖಂಡೆ ರೇಖಾ ಉಮಾಶಂಕರ್, ನಿವೃತ್ತ ಪೊಲೀಸ್ ಅಧಿಕಾರಿ ಅರೇಂದ್ರಗೌಡ, ಬ್ರಾಹ್ಮಣ ಸಮಾಜದ ರಾಘವೇಂದ್ರ ಮಯ್ಯ, ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಶಿ ಮಹೇಶ್ವರ್, ಜೆಡಿಎಸ್ ಮುಖಂಡ ಶ್ಯಾನುಭೋಗನಹಳ್ಳಿ ರವಿ, ಬಿಜೆಪಿ ಮುಖಂಡ ಕೆ.ಟಿ. ಜಯರಾಮು, ಮುಖಂಡ ಯೋಗಲಿಂಗು, ಉಪನ್ಯಾಸಕ ಬಿ.ಪಿ. ಸುರೇಶ್, ರಂಗಭೂಮಿ ಕಲಾವಿದ ಎಂಟಿಆರ್ ತಿಮ್ಮರಾಜು, ನಗರಸಭಾ ಸದಸ್ಯ ಶಾಬೀರ್, ಕಾರ್ಮಿಕ ರಮೇಶ್, ದಸಂಸ ಸಂಚಾಲಕ ವೆಂಕಟೇಶ್ ಮಾತನಾಡಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ಪತ್ರಕರ್ತ ಆರ್. ಶಂಕರ್, ಮುಖಂಡರಾದ ತಗಚಗೆರೆ ದೇವರಾಜು, ಕೂಡ್ಲೂರು ಚಿಕ್ಕಯ್ಯ, ಸೂರಿ, ಆಟೊ ವೆಂಕಟೇಶ್, ರಾಜೇಶ್ ಬೆಳಕೆರೆ, ಎ.ವಿ. ಹಳ್ಳಿ. ನಿಂಗರಾಜು, ಲ್ಯಾಬ್ ರಾಮು, ಬುಕ್ಕಸಾಗರ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.