ಚನ್ನಪಟ್ಟಣ: ಹತ್ತು ವರ್ಷದ ಬಳಿಕ ತಾಲ್ಲೂಕಿನ ಚಕ್ಕೆರೆ ಗ್ರಾಮ ದೇವತೆ ಪಟ್ಟಲದಮ್ಮ ದೇವಿ ಕೊಂಡ ಹಾಗೂ ಜಾತ್ರಾ ಮಹೋತ್ಸವ ಮೇ 7ರಿಂದ ಮೂರು ದಿನ ನಡೆಯಲಿದೆ. ಮೇ 7ರಂದು ಕೊಂಡ ಸೌದೆ, ಸಿಡಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ನಡೆಯಲಿವೆ.

8ರಂದು ಬೆಳಗ್ಗೆ 7 ಗಂಟೆಗೆ ರೇವಣಸಿದ್ದೇಶ್ವರ ಬೆಟ್ಟದಿಂದ ದೇವರನ್ನು ತರಲಾಗುವುದು. ಮಧ್ಯಾಹ್ನ 3.30ಕ್ಕೆ ಕೊಂಡ ಬಂಡಿ ನಡೆಯಲಿದೆ. ಸಂಜೆ ಕರಗ ಮಹೋತ್ಸವ ಜರುಗಲಿದೆ.

ರಾತ್ರಿ ಕೊಂಡಕ್ಕೆ ಅಗ್ನಿಸ್ಪರ್ಶ, ಕರಗ ಸಿಡಿಮದ್ದು, ಬಾಯಿ ಬೀಗ, ಮೆರವಣಿಗೆ ಹಾಗೂ ಬೆಳಗಿನ ಜಾವ ಪಟ್ಟಲದಮ್ಮ ಮತ್ತು ಎಲ್ಲೇರಪ್ಪ ಕೊಂಡ ಮಹೋತ್ಸವ ನಡೆಯಲಿವೆ. ಮೇ 9ರಂದು ಪಟ್ಟಲದಮ್ಮ ಹಾಗೂ ಬೋರೆ ದೇವರ ಪೂಜಾ ಮೆರವಣಿಗೆ, ಹೂವು, ಹೊಂಬಾಳೆ ಸಮೇತ ಸಿಡಿ ಜಾತ್ರೆ, ಸಿಡಿಮದ್ದುಗಳ ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು.

ಶಾಸಕ ಸಿ.ಪಿ. ಯೋಗೇಶ್ವರ್ ಅಧ್ಯಕ್ಷತೆ ವಹಿಸುವರು. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ, ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದ ಸ್ವಾಮೀಜಿ ವಿವಿಧ ಮಠಾಧೀಶರು ಭಾಗವಹಿಸುವರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಡಾ.ಸಿ.ಎನ್. ಮಂಜುನಾಥ್, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ , ರವಿ, ನಿಖಿಲ್ ಕುಮಾರಸ್ವಾಮಿ ಹಲವುರು ಭಾಗವಹಿಸುವರು ಎಂದು ದೇವಾಲಯದ ಪ್ರಧಾನ ಅರ್ಚಕ ಸಿ.ಎಲ್. ರಾಜು, ಪಟ್ಟಲದಮ್ಮ ಸೇವಾ ಟ್ರಸ್ಟ್ನ ಚಕ್ಕೆರೆ ವೆಂಕಟರಾಮೇಗೌಡ ಮತ್ತು ಚಿಕ್ಕೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.