ಚನ್ನಪಟ್ಟಣ: ಅಧ್ಯಾತ್ಮಿಕ ಸಾಕ್ಷಾತ್ಕಾರ ಪಡೆಯಲು ನಿಷ್ಕಲ್ಮಶವಾದ ಭಕ್ತಿ ಭಾವದ ಅವಶ್ಯಕತೆ ಇದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಚಾಮುಂಡೇಶ್ವರಿ (ಚೌಡೇಶ್ವರಿ) ದೇವಸ್ಥಾನದ ಕುಂಭಾಭಿಷೇಕ, ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಶುಕ್ರವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತನ್ನು ನಾಲ್ಕು ಶಕ್ತಿಗಳು ನಿಯಂತ್ರಿಸುತ್ತವೆ. ಗುರುತ್ವಾಕರ್ಷಣ ಶಕ್ತಿ, ವಿದ್ಯುತ್ ಕಾಂತೀಯ ಶಕ್ತಿ, ಪ್ರಬಲ ಪರಮಾಣು ಶಕ್ತಿ ಹಾಗೂ ದುರ್ಬಲ ಪರಮಾಣು ಶಕ್ತಿ. ಹಾಗೆಯೇ ಚಾಮುಂಡೇಶ್ವರಿ, ದುರ್ಗಾ ಮಾತೆ, ಲಲಿತಾದೇವಿ, ಪಾರ್ವತಿದೇವಿ ನಿಯಂತ್ರಿಸುತ್ತಾರೆ. ಈ ಎಲ್ಲದರ ತತ್ವ ಒಂದೆ. ಅದುವೇ ಆದಿಶಕ್ತಿ. ಕೋಪ ರೋಷಗಳನ್ನು ತ್ಯಜಿಸಿ ಪ್ರೀತಿಯ ಭಕ್ತಿ ಭಾವದಿಂದ ಧ್ಯಾನಿಸಿದರೆ ದೇವರು ಕಾಣಿಸುತ್ತಾನೆ ಎಂದರು.

ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಿಜವಾದ ದೈವಭಕ್ತರು ಯಾವುದೇ ತಪ್ಪು ಮಾಡುವುದಿಲ್ಲ. ಸಂಸ್ಕಾರ, ಸಂಸ್ಕೃತಿಗಳು ಮಾನವ ಕುಲದ ಒಳಿತಿಗೆ ಪೂರಕವಾಗಿರಬೇಕು. ಆಧುನಿಕ ಆಡಂಬರದ ಹೆಸರಿನಲ್ಲಿ ವಿಕೃತಿ ಸಲ್ಲದು ಎಂದರು.

ರಾಮನಗರ ಬಿಜಿಎಸ್ ಮಠದ ಅನ್ನದಾನೇಶ್ವರ ಸ್ವಾಮೀಜಿ, ನಗರದ ವಿರಕ್ತಮಠದ ಶಿವರುದ್ರ ಸ್ವಾಮೀಜಿ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಶಾಸಕ ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ನಗರ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ನಗರಸಭಾ ಅಧ್ಯಕ್ಷ ನಾಗೇಶ್, ಡಿ.ಕೆ. ಕಾಂತರಾಜು, ಕೋಡಂಬಹಳ್ಳಿ ಶಿವಮಾದು, ಸಿದ್ದಪ್ಪ, ಎಂ.ಕೆ. ಮೋಹನ್ ದಾಸ್, ಎಂ.ಕೆ. ಗೋಪಾಲ್, ಎಂ.ಡಿ. ಚಾಮರಾಜು, ಎಂ.ಎಸ್. ರವಿ, ಕುಮಾರ್, ಡಿ.ಪಿ.ಎಸ್.ಗೌಡ, ಜಯಸ್ವಾಮಿ, ಪೋಲೀಸ್ ರಾಮಚಂದ್ರು, ಚಂದ್ರಶೇಖರ್, ಪರಮೇಶ್ವರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-14-383079346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.