ಚನ್ನಪಟ್ಟಣ: ನಿವೃತ್ತ ಕನ್ನಡ ಪ್ರಾಧ್ಯಾಪಕ ದಿವಂಗತ ಅಂಕಯ್ಯ ನಾಗವಾರ ಅವರ ಸವಿನೆನಪಿಗಾಗಿ ನಗರದ ಸಾರ್ವಜನಿಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ರಾಷ್ಟ್ರಕವಿ ಕುವೆಂಪು ಅವರ ಕೃತಿಗಳನ್ನು ವಿತರಿಸಲಾಯಿತು.

ಕುವೆಂಪು ಅವರ ಮರಿ ವಿಜ್ಞಾನಿ, ಮೋಡಣ್ಣನ ತಮ್ಮ, ನರಿಗಳಿಗೇಕೆ ಕೋಡಿಲ್ಲ, ಜಲಗಾರ (ನಾಟಕ) ಕೃತಿಗಳನ್ನು ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ವಿತರಿಸಲಾಯಿತು.

ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ, ಮನುಜ ಮತ ವಿಶ್ವಪಥ, ಸರ್ವೋದಯ, ಸಮನ್ವಯ, ಮತ್ತು ಪೂರ್ಣದೃಷ್ಟಿ ವಿಚಾರಧಾರೆ ಎಲ್ಲೆಡೆ ಪಸರಿಸಬೇಕು ಎಂಬುದು ಅಂಕಯ್ಯ ನಾಗವಾರ ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಇಂತಹ ವಿಚಾರಧಾರೆಗಳು ತಲುಪಿಸುವ ಉದ್ದೇಶದಿಂದ ಕುವೆಂಪು ಅವರ ಕೃತಿಗಳನ್ನು ಮಕ್ಕಳಿಗೆ ವಿತರಣೆ ಮಾಡಿದ್ದೇವೆ ಎಂದು ಅಂಕಯ್ಯ ನಾಗವಾರ ಅವರ ಪುತ್ರ ಅಭಿನಂದನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಈ ವೇಳೆ ವಿದ್ಯಾಸಂಸ್ಥೆಯ ನಿರ್ದೇಶಕ ಶಂಭೂಗೌಡ ನಾಗವಾರ, ರಂಗ ಕಲಾವಿದ ಉಮೇಶ್, ಲೇಖಕ ಅಭಿಗೌಡ, ಪತ್ರಕರ್ತ ಗೋ.ರಾ.ಶ್ರೀನಿವಾಸ್, ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.