ಚನ್ನಪಟ್ಟಣ: ತಾಲ್ಲೂಕಿನ ಮೆಣಸಿಗನಹಳ್ಳಿಯಲ್ಲಿ ಗುರುವಾರ ಮುಂಜಾನೆ ಚಿರತೆ ದಾಳಿಯಲ್ಲಿ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೀರು ಹಾಯಿಸಲು ಬೆಳಗಿನ ಜಾವ ಜಮೀನಿಗೆ ಹೊರಟಿದ್ದ ಮೆಣಸಿಗನಹಳ್ಳಿಯ ರೈತ ಸಣ್ಣಪ್ಪ (73) ಅವರ ಮೇಲೆ ಪೊದೆಯಲ್ಲಿ ಅವಿತಿದ್ದ ಚಿರತೆ ದಾಳಿ ನಡೆಸಿದೆ.

ಹಠಾತ್ ದಾಳಿಯಿಂದ ಭೀತಗೊಂಡ ರೈತ ಕೂಗಿಕೊಂಡಾಗ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಆಗಮಿಸಿ ಕಿರುಚಿದಾಗ ಚಿರತೆ ಪರಾರಿಯಾಗಿದೆ.

ಘಟನೆಯಲ್ಲಿ ಸಣ್ಣಪ್ಪ ಅವರ ಎಡತೋಳು, ಬಲಗಣ್ಣು, ಮುಖದ ಭಾಗದಲ್ಲಿ ಗಾಯಗಳಾಗಿವೆ. ಗ್ರಾಮಸ್ಥರಿಂದ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಹಾಗೂ ಸಿಬ್ಬಂದಿ ಗಾಯಗೊಂಡ ರೈತನನ್ನು ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.

ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಲ್ಲೇಶ್ ತಿಳಿಸಿದ್ದಾರೆ.

ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಗ್ರಾಮದ ರೈತನ ಮೇಲೆ ಮಾರ್ಚ್ 28 ರಂದು ಕರಡಿ ದಾಳಿ ನಡೆಸಿತ್ತು. ಆನಂತರ ಏ.1 ರಂದು ಲಂಬಾಣಿ ತಾಂಡ್ಯದಲ್ಲಿ ರೈತನ ಮೇಲೆ ಜೋಡಿ ಕರಡಿ ದಾಳಿ ನಡೆಸಿದ್ದವು. ಏ.19ರ ರಾತ್ರಿ ಮಂಗಾಡಹಳ್ಳಿ ಗ್ರಾಮದ ರೈತನ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಈಗ ಮೆಣಸಿಗನಹಳ್ಳಿ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ ನಡೆಸಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ರೈತರು ರಾತ್ರಿಯ ವೇಳೆ ಹೊಲಗದ್ದೆಗಳ ಬಳಿ ತೆರಳಲು ಆತಂಕ ಪಡುವ ವಾತಾವರಣ ಸೃಷ್ಟಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-14-972969888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.