ಶನಿವಾರ, ಮೇ 28, 2022
29 °C

ಚನ್ನಪಟ್ಟಣ: ಬಸಪ್ಪ ದೇವರ ಕೊಂಡಕ್ಕೆ ಬಿದ್ದು ಅರ್ಚಕರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಂಡ ಹಾಯುವಾಗ ಎಡವಿ‌ ಬಿದ್ದು ಅರ್ಚಕ ನಂದೀಶ್

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಹರೂರು ಗ್ರಾಮದ ಹೊರವಲಯದಲ್ಲಿ  ಮಂಗಳವಾರ ಮುಂಜಾನೆ ದೇವರ ಕೊಂಡ ಹಾಯುವಾಗ ಎಡವಿ‌ ಬಿದ್ದು ಅರ್ಚಕ ನಂದೀಶ್ ಎಂಬುವರು ಗಾಯಗೊಂಡಿದ್ದಾರೆ.

ಹರೂರು, ಮೊಗೇನಹಳ್ಳಿ, ಮಂಕುಂದ ಗ್ರಾಮದ ಜನರು ಸೇರಿ ಬಸಪ್ಪ ದೇವರ ಕೊಂಡ ಕಾರ್ಯಕ್ರಮ ಆಯೋಜಿಸಿದ್ದರು. ಮಂಕುಂದ ಗ್ರಾಮದವರಾದ ನಂದೀಶ್ ಮೊದಲ ಬಾರಿಗೆ ಕೊಂಡ ಹಾಯಲು ಹೋಗಿದ್ದು, ಈ ವೇಳೆ ಜಾರಿ ಬಿದ್ದರು. ಗಾಯಾಳುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು