ಚನ್ನಪಟ್ಟಣ: ತಾಲ್ಲೂಕಿನ ವಂದಾರಗುಪ್ಪೆ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಗ್ರಾಹಕರೊಬ್ಬರ ಖಾತೆಯಿಂದ ಸೈಬರ್ ವಂಚಕರು ₹5.95ಲಕ್ಷ ಆನ್ಲೈನ್ ಮೂಲಕ ಕಳವು ಮಾಡಿದ್ದಾರೆ. ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಗ್ರಾಮದ ಪಿಎಸಿಎಸ್ ಅಧ್ಯಕ್ಷ ವಿ.ಬಿ.ಚಂದ್ರಯ್ಯ ಅವರ ಖಾತೆಯಲ್ಲಿ ₹6.35ಲಕ್ಷ ಇತ್ತು. ಇದರಲ್ಲಿ ₹5.95 ಲಕ್ಷವನ್ನು ಯಾವುದೇ ಒಟಿಪಿ ಕೇಳದೆಯೇ ವಂಚಕರು ಕದ್ದಿದ್ದಾರೆ. ಅಷ್ಟೇ ಅಲ್ಲ; ಇಷ್ಟು ದೊಡ್ಡ ಮೊತ್ತ ಡೆಬಿಟ್ ಆದರೂ ಚಂದ್ರಯ್ಯ ಅವರ ಮೊಬೈಲ್ಗೆ ಯಾವುದೇ ಸಂದೇಶ ಬಂದಿಲ್ಲ.

ಸೋಮವಾರ ಬೆಳಗ್ಗೆ ಹಾಲಿನ ಹಣ ಬ್ಯಾಂಕ್ಗೆ ಹಾಕಲು ಹೋದಾಗ ಖಾತೆ ನಿಷ್ಕ್ರಿಯಗೊಂಡಿರುವುದು ಗೊತ್ತಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಹಣ ಖೋತಾ ಆಗಿರುವುದು ದೃಢಪಟ್ಟಿದೆ.

10 ನಿಮಿಷದಲ್ಲೇ ₹5.95ಲಕ್ಷ ಖೋತಾ: ಭಾನುವಾರ ತಡರಾತ್ರಿ 1:30 ರಿಂದ 1:40ರೊಳಗೆ ಐದು ಬಾರಿ ಹಣ ವರ್ಗಾವಣೆಯಾಗಿದೆ. ಕ್ರಮವಾಗಿ ₹50 ಸಾವಿರ, ₹45 ಸಾವಿರ, ₹2 ಲಕ್ಷ, ಮತ್ತೆ ₹2 ಲಕ್ಷ, ಮತ್ತೆ ₹1 ಲಕ್ಷ ಖೋತಾ ಆಗಿದೆ. ಕೇವಲ 10 ನಿಮಿಷದಲ್ಲಿ ಯುಪಿಐ ಮೂಲಕ ಈ ಹಣ ವರ್ಗಾವಣೆಯಾಗಿದೆ.

ಬ್ಯಾಂಕ್ ದಾಖಲೆಗಳ ಪರಿಶೀಲನೆಯಲ್ಲಿ ಆಂಧ್ರಪ್ರದೇಶದ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಒಂದು ಕಡೆ 'ಜನರಲ್ ಸ್ಟೋರ್' ಎಂದೂ, ಮತ್ತೊಂದೆಡೆ 'ಹಾರ್ಡವೇರ್' ಎಂದೂ ನಮೂದಾಗಿದೆ.

ರಾಮನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-14-1562702765

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.