ಚನ್ನಪಟ್ಟಣ: ತಾಲ್ಲೂಕಿನಲ್ಲಿ ಮಾನವ– ವನ್ಯಜೀವಿಗಳ ಸಂಘರ್ಷ ತೀವ್ರವಾಗುತ್ತಿದೆ. ಎರಡೂವರೆ ತಿಂಗಳಲ್ಲಿ ತಾಲ್ಲೂಕಿನಲ್ಲಿ ಐದು ಮಂದಿ ಮೇಲೆ ಕಾಡುಪ್ರಾಣಿಗಳು ದಾಳಿ ನಡೆಸಿವೆ.

ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗುತ್ತಿದ್ದಾರೆ. ಇದರ ಜೊತೆಗೆ ಕರಡಿ, ಚಿರತೆಗಳ ಹಾವಳಿಯೂ ಹೆಚ್ಚಾಗುತ್ತಿವೆ. ಜನನಿಬಿಡವಾಗಿರುವ ಪ್ರಮುಖ ರಸ್ತೆಗಳಲ್ಲಿಯೂ ಆನೆ, ಚಿರತೆ, ಕರಡಿಗಳು ಕಾಣಿಸಿಕೊಳ್ಳಲಾರಂಭಿಸಿವೆ. ರೈತರು ತಮ್ಮ ತೋಟಗಳಿಗೆ ಕೃಷಿ ಕೆಲಸಕ್ಕೆ ತೆರಳಲು, ವಾಹನ ಸವಾರರು ರಸ್ತೆಗಳಲ್ಲಿ ಓಡಾಡಲು, ಜನರು ರಾತ್ರಿ ವೇಳೆ ಮನೆಯಿಂದ ಆಚೆ ಬರಲು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ.

ಚಿರತೆಗಳು ಅಲ್ಲಲ್ಲಿ ಕಾಣಿಸಿಕೊಂಡು ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ನಿದರ್ಶನಗಳು ಹಲವಿದ್ದವು. ಇತ್ತೀಚಿನ ದಿನಗಳಲ್ಲಿ ಕರಡಿಗಳು ಕಾಣಿಸಿಕೊಳ್ಳಲಾರಂಭಿಸಿವೆ. ಇವು ಸಹ ಜನರನ್ನೇ ಗುರಿಯಾಗಿಸಿವೆ.

ಮಾರ್ಚ್ 3ರಂದು ತಾಲ್ಲೂಕಿನ ಸಂತೆಮೊಗೇನಹಳ್ಳಿಯಲ್ಲಿ 70 ವರ್ಷದ ರೈತ ನಾರಾಯಣಗೌಡ ಅವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿತ್ತು. ಮಾರ್ಚ್ 28ರಂದು ತಾಲ್ಲೂಕಿನ ಬೈರಾಶೆಟ್ಟಿಹಳ್ಳಿ ಬಳಿಯ ದಂಡಿಮಾರಮ್ಮನ ದೇವಸ್ಥಾನದ ಬಳಿ ರೈತ ದೊಡ್ಡಯ್ಯ ಅವರ ಮೇಲೆ ಕರಡಿ ದಾಳಿ ನಡೆಸಿತ್ತು. ಸೆರೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮೇಲೂ ದಾಳಿ ಮಾಡಿ ಗಾಯಗೊಳಿಸಿತ್ತು. ಆನಂತರ ಅದಕ್ಕೆ ರೇಬಿಸ್ ಇರುವುದು ಪತ್ತೆಯಾಗಿತ್ತು. ಅದು ಬನ್ನೇರುಘಟ್ಟದಲ್ಲಿ ಮೃತಪಟ್ಟಿತ್ತು.

ಏಪ್ರಿಲ್ 1ರಂದು ತಾಲ್ಲೂಕಿನ ಲಂಬಾಣಿತಾಂಡ್ಯದ ಬಳಿ ಜೋಡಿಕರಡಿಗಳು ಗ್ರಾಮದ ರೈತ ರಮೇಶ್ ಅವರ ಮೇಲೆ ದಾಳಿ ಮಾಡಿದ್ದವು. 19ರಂದು ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ತೋಟದಲ್ಲಿ ಕಾಣಿಸಿಕೊಂಡಿದ್ದ ಮೂರು ಕಾಡಾನೆಗಳನ್ನು ಕಾಡಿಗಟ್ಟುವ ವೇಳೆ ಗುಂಪಿನಿಂದ ಬೇರ್ಪಟ್ಟಿದ್ದ ಸಲಗವೊಂದು ಮಂಗಾಡಹಳ್ಳಿಯ ರೈತ ಕಾಂತರಾಜು ಮೇಲೆ ದಾಳಿ ಮಾಡಿತ್ತು. ದಂತದಿಂದ ಅವರ ಹೊಟ್ಟೆಗೆ ಇರಿದಿತ್ತು. ಮೇ 3ರಂದು ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು.

ಏಪ್ರಿಲ್ 23ರಂದು ತಾಲ್ಲೂಕಿನ ಮೆಣಸಿಗನಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ರೈತ ಸಣ್ಣಪ್ಪ ಅವರ ಮೇಲೆ ದಾಳಿ ಮಾಡಿತ್ತು. ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರಕ್ಕೂ ಆನೆಗಳು ಕಾಲಿಟ್ಟಿವೆ. ಬೆಳೆಗಳ ಮೇಲೆ ದಾಳಿ ಮಾಡಿರುವ ಹತ್ತಾರು ನಿದರ್ಶನಗಳಿವೆ. ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡಿರುವ ಹಲವು ಘಟನೆಗಳು ತಾಲ್ಲೂಕಿನಲ್ಲಿ ವರದಿಯಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-14-859549888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.