ಚನ್ನಪಟ್ಟಣ: ತಾಲ್ಲೂಕಿನ ಚಕ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ₹4 ಲಕ್ಷ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯ ಒಂಬುಡ್ಸ್ಮನ್ ಪ್ರತಿನಿಧಿ ಮಹೇಂದ್ರಕುಮಾರ್ ಮಂಗಳವಾರ ಗ್ರಾಮದಲ್ಲಿ ಕಾಮಗಾರಿ ಪರಿಶೀಲಿಸಿದರು.

ತಾಲ್ಲೂಕಿನ ಚಕ್ಕೆರೆಯ ಪುಟ್ಟಮಾದೇಗೌಡ ಕಾಂಪೌಂಡ್ ಬಳಿಯಿಂದ ಪಟ್ಟಲದಮ್ಮ ದೇವಸ್ಥಾನದ ಕಮಾನಿನವರೆಗೆ ಕಾಲುವೆ ಅಭಿವೃದ್ಧಿಗಾಗಿ ಮಂಜೂರಾಗಿದ್ದ ₹4 ಲಕ್ಷ ಹಣವನ್ನು ಕಾಮಗಾರಿ ಕೈಗೊಳ್ಳದೆ ಖೊಟ್ಟಿ ಬಿಲ್ ಸೃಷ್ಟಿಸಲಾಗಿದೆ.

₹1.89 ಲಕ್ಷ ಬಿಲ್ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಚಕ್ಕೆರೆಯ ನಿಂಗರಾಜು ಜಿ.ಪಂ. ಸಿಇಒ, ತಾ.ಪಂ. ಇಒ ಹಾಗೂ ನರೇಗಾ ಒಂಬುಡ್ಸ್ ಮನ್ಗೆ ದೂರು ನೀಡಿದ್ದರು.

‘ಚಕ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿ ವೀಕ್ಷಣೆ ಮಾಡಿರುವೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾಮಗಾರಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ, ಹಣ ದುರುಪಯೋಗವಾಗಿದ್ದರೆ ಅಕ್ರಮ ಎಸಗಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವೆ’ ಎಂದು ಮಹೇಂದ್ರಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ದೂರುದಾರ ನಿಂಗರಾಜು, ಗ್ರಾಮದ ಪುಟ್ಟಸ್ವಾಮಿ, ಕೃಷ್ಣ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-14-1266317604

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.