ಚನ್ನಪಟ್ಟಣ: ಮರೀಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದಲ್ಲಿ ತಾಲ್ಲೂಕಿನ ಅಂಗವಿಕಲರಿಗೆ ಆಹಾರ ಕಿಟ್ ವಿತರಣೆ ಮತ್ತು ಸಾರ್ವಜನಿಕರಿಗೆ ತೆಂಗಿನ ಸಸಿ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ನೂರಾರು ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಲಾಯಿತು. ಸಾರ್ವಜನಿಕರಿಗೆ ತೆಂಗಿನ ಸಸಿ, ಆಡಿಕೆ ಸಸಿ, ನಿಂಬೆ ಸಸಿಗಳನ್ನು ವಿತರಿಸಲಾಯಿತು.

ಸಮಾಜಸೇವಕ ಎಚ್.ಎಂ.ನಾಗೇಶ್ ಮಾತನಾಡಿ ‘ಟ್ರಸ್ಟ್ ವತಿಯಿಂದ ಸಮಾಜಸೇವಾ ಕಾರ್ಯಕ್ರಮದ ಅಂಗವಾಗಿ ಅಂಗವಿಕಲರಿಗೆ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಶಿಕ್ಷಣ, ಸಾರ್ವಜನಿಕ ಸೇವೆಗೆ ಟ್ರಸ್ಟ್ ಬದ್ಧವಾಗಿದೆ’ ಎಂದು ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿದರು.

ಉದ್ಯಮಿ ಎಂ.ಎನ್. ಹೊಸಹಳ್ಳಿ ಜಗದೀಶ್, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸತೀಶ್, ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್ ಗೌಡ, ವೇದಿಕೆಯ ಪದಾಧಿಕಾರಿಗಳಾದ ದೊಡ್ಡಯ್ಯ, ಮಂಗಳವಾರಪೇಟೆ ಕೃಷ್ಣಪ್ರಸಾದ್, ಶಿವಕುಮಾರ್, ರಾಮಸ್ವಾಮಿ, ಚಂದ್ರು, ಚೌ.ಪು.ಸ್ವಾಮಿ, ಮತ್ತಿಕೆರೆ ಸೋಮರಾಜು, ಮರಿಅಂಕೇಗೌಡ, ತಗಚಗೆರೆ ದೇವರಾಜು, ಆರ್. ಶಂಕರ್, ಹನುಮಾಪುರದೊಡ್ಡಿ ಅಪ್ಪಾಜಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-14-607306536

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.