ಚನ್ನಪಟ್ಟಣ: ನಗರದ ಕುಡಿನೀರುಕಟ್ಟೆ ಸಮೀಪ ಬೆಂಗಳೂರು– ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಕೊಳೆತ ಮಾವಿನ ಹಣ್ಣು ಸುರಿಯಲಾಗಿದ್ದು, ಇಡೀ ವಾತಾವರಣ ಗಬ್ಬು ನಾರುತ್ತಿದೆ. ಜತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಹೆದ್ದಾರಿ ಅಕ್ಕಪಕ್ಕದಲ್ಲಿ ಸುಮಾರು ನೂರು ಮೀಟರ್ ದೂರದಷ್ಟು ಕೊಳೆತ ಮಾವಿನ ಹಣ್ಣುಗಳ ರಾಶಿ ಹಾಕಲಾಗಿದೆ. ಕೊಳೆತ ಮಾವಿನ ಹಣ್ಣುಗಳಿಂದ ಹುಳುಗಳು ಹೊರಬರುತ್ತಿವೆ. ಇದರಿಂದ ಇಲ್ಲಿನ ಪರಿಸರ ಹಾಳಾಗಿ ಸೊಳ್ಳೆಯ, ನೊಣಗಳು ಹೆಚ್ಚುತ್ತಿವೆ. ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ.

ಹೆದ್ದಾರಿಯ ಪಕ್ಕದಲ್ಲೇ ಇರುವ ಎಪಿಎಂಸಿ ಮಾರುಕಟ್ಟೆಯ ಮಾವಿನ ಮಂಡಿಗೆ ಹಣ್ಣು ಮಾರಾಟ ಮಾಡಲು ಬರುವ ರೈತರು ಬಿಕರಿಯಾಗದೆ ಉಳಿದರೆ ಹೆದ್ದಾರಿಯ ಇಕ್ಕೆಲಗಳಲ್ಲಿ ಸುರಿದು ಹೋಗುತ್ತಾರೆ. ಇದು ದೊಡ್ಡ ರಾಶಿಯನ್ನೇ ನಿರ್ಮಿಸಿದೆ. ಇವು ಕೊಳೆತು ಗಬ್ಬು ನಾರುತ್ತಿವೆ. ಇದಕ್ಕೂ ಎಪಿಎಂಸಿ ಮಂಡಿಗಳಿಗೂ ಸಂಬಂಧವಿಲ್ಲ. ಕೊಳೆತ ಮಾವಿನ ಹಣ್ಣುಗಳನ್ನು ಸುರಿಯದಂತೆ ತಡೆಯುವುದು ನಗರಸಭೆ ಕೆಲಸ ಎಂದು ಇಲ್ಲಿನ ಮಾವಿನ ಮಂಡಿಗಳ ಮಾಲೀಕರು ಹೇಳುತ್ತಾರೆ.

ಮಾವಿನ ಹಣ್ಣು ಖರೀದಿಸುವ ಮಂಡಿಗಳ ಮಾಲೀಕರು ಬೇರೆಡೆಗೆ ಕಳುಹಿಸಲು ಗುಣಮಟ್ಟದ ಹಣ್ಣುಗಳನ್ನು ಆಯ್ಕೆ ಮಾಡಿಕೊಂಡು ಪ್ಯಾಕಿಂಗ್ ಮಾಡುತ್ತಾರೆ. ಆಗ ಉಳಿಯುವ, ಹಾಳಾಗಿರುವ ಹಣ್ಣುಗಳನ್ನು ಹೆದ್ದಾರಿಯ ಪಕ್ಕದಲ್ಲಿ ಸುರಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ರೈತರು, ಮಂಡಿಗಳ ಮಾಲೀಕರು ಹೆದ್ದಾರಿ ಎರಡು ಬದಿಯಲ್ಲಿ ಕೊಳೆತ ಮಾವಿನ ಹಣ್ಣು ಸುರಿಯುತ್ತಿರುವ ಕಾರಣ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವ ಆತಂಕ ಕಾಡುತ್ತಿದೆ. ಕೊಳೆತ ಮಾವಿನ ಹಣ್ಣುಗಳನ್ನು ಗುಂಡಿ ತೆಗೆದು ಮುಚ್ಚಬೇಕು. ಆದರೆ ರಸ್ತೆಯ ಬದಿಯಲ್ಲಿ ಸುರಿಯುತ್ತಿರುವುದರಿಂದ ಸೊಳ್ಳೆ, ನೊಣಗಳು ಹೆಚ್ಚಾಗುತ್ತಿವೆ. ಜತೆಗೆ ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತಆಗುತ್ತಿದೆ ಎಂದು ಸ್ಥಳೀಯರಾದ ಮನೋಹರ್, ಸಿದ್ದಪ್ಪ ಹೇಳುತ್ತಾರೆ.

ಕಳೆದ ಎರಡು ತಿಂಗಳಿಂದಲೂ ಹೆದ್ದಾರಿ ಬದಿ ಇಂತಹ ವಾತಾವರಣ ಸೃಷ್ಟಿಆಗಿದ್ದರೂ ನಗರಸಭೆ, ಎಪಿಎಂಸಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನಿರಂತರವಾಗಿ ಕೊಳೆತ ಮಾವಿನ ಹಣ್ಣು ಹಾಕುತ್ತಿದ್ದರೂ ಗಮನ ಹರಿಸುತ್ತಿಲ್ಲ ಎಂದು ವಾಸಿಂ ಖಾನ್, ಮಹಮದ್ ನೂರ್ ದೂರುತ್ತಾರೆ.

‘ಎಪಿಎಂಸಿ ಕಚೇರಿ, ಮಾರುಕಟ್ಟೆ ಆವರಣದಲ್ಲಿ ಸುರಿಯುವ ಮಾವಿನ ಹಣ್ಣುಗಳಿಗೆ ನಾವು ಜವಾಬ್ದಾರರು. ಅದನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಆದರೆ ಹೆದ್ದಾರಿಯ ಪಕ್ಕದಲ್ಲಿ ಸ್ವಚ್ಛತೆ ಮಾಡುವುದು ನಗರಸಭೆಗೆ ಸಂಬಂಧಪಟ್ಟಿದ್ದು. ಕೊಳೆತ ಮಾವು ತೆರವು ಮಾಡಿ ಸ್ವಚ್ಛತೆಗೆ ಆದ್ಯತೆ ಕಾಪಾಡುವಂತೆ ನಗರಸಭೆಗೆ ಪತ್ರ ಬರೆಯಲಾಗಿದೆ. ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು.

ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೊಳೆತ ಮಾವಿನ ಹಣ್ಣು ರಾಶಿಯಿಂದ ನಗರದ ಸ್ವಚ್ಛತೆ ಹಾಳಾಗುತ್ತಿದೆ. ಇದನ್ನು ತೆರವುಗೊಳಿಸಿ ಪರಿಸರ ಕಾಪಾಡಬೇಕು. ಸೊಳ್ಳೆ, ನೊಣಗಳ ಕಾಟದಿಂದ ನಮಗೆ ಮುಕ್ತಿ ನೀಡಬೇಕು. ಮುಂದೆ ಮಾವಿನ ಹಣ್ಣು ಸುರಿಯದಂತೆ ಕ್ರಮ ವಹಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.