ಚನ್ನಪಟ್ಟಣ: ಮನೆ ಚಪ್ಪಲಿ ಸ್ಟ್ಯಾಂಡ್ನಲ್ಲಿ ಇದ್ದ ಶೂ ತೆಗೆದುಕೊಳ್ಳುವಾಗ ವಿಷಪೂರಿತ ಹಾವು ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಮಹದೇಶ್ವರ ನಗರದ 4 ವರ್ಷದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾನೆ.

ಸಾತ್ವಿಕ್ (4) ಮೃತ ಬಾಲಕ. ತಾಲ್ಲೂಕಿನ ಅಕ್ಕೂರು ಗ್ರಾಮದ ನಿರಂಜನ್ ಮತ್ತು ನಾಗಮಣಿ ದಂಪತಿ ಪುತ್ರ. ಮಗುವಿನ ತಂದೆ–ತಾಯಿ ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿದ್ದು ಅಲ್ಲೇ ವಾಸವಿದ್ದಾರೆ. ಮಗು ನಗರದ ಮಹದೇಶ್ವರ ನಗರದ ಎರಡನೇ ಹಂತದ ಬಡಾವಣೆಯಲ್ಲಿ ತಾತನ ಮನೆಯಲ್ಲಿ ವಾಸವಿತ್ತು.

ಏ.28ರ ಸಂಜೆ 6ಗಂಟೆ ವೇಳೆಯಲ್ಲಿ ಬಾಲಕ ಮನೆ ಬಾಗಿಲ ಬಳಿ ಇದ್ದ ಚಪ್ಪಲಿ ಸ್ಟ್ಯಾಂಡ್ನಲ್ಲಿ ಇದ್ದ ಶೂ ಅನ್ನು ತೆಗೆದುಕೊಳ್ಳಲು ಹೋಗಿದೆ. ಆಗ ಸ್ಟ್ಯಾಂಡ್ ನಲ್ಲಿ ಇದ್ದ ಹಾವು ಮಗುವಿನ ಕೈಗೆ ಕಚ್ಚಿದೆ.

ತಕ್ಷಣ ಮಗುವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಮಗುವಿನ ದೇಹದಲ್ಲಿ ಹಾವಿನ ವಿಷ ತೀವ್ರವಾಗಿ ಹರಡಿದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಗು ಗುರುವಾರ ಮೃತಪಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕೂರು ಗ್ರಾಮದಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಯಿತು.

ವೈದ್ಯರ ನಿರ್ಲಕ್ಷ್ಯ ಆರೋಪ: ‘ಮಗನ ಸಾವಿಗೆ ನಗರದ ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಕಾರಣ’ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

‘ಮಗುವಿಗೆ ತಕ್ಷಣ ಹಾವು ಕಡಿತದ ಪ್ರತಿರೋಧಕ ಇಂಜೆಕ್ಷನ್ ನೀಡಿದ್ದರೆ ಮಗುವಿನ ಜೀವ ಉಳಿಯುತಿತ್ತು. ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡಿದ ಇಂಜೆಕ್ಷನ್ ವಿವರ ಚೀಟಿ ನಮ್ಮಲ್ಲಿ ಇದೆ. ನಾವು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಚೀಟಿಯನ್ನು ನೋಡಿ ಅಲ್ಲಿಯ ವೈದ್ಯರು ಹಾವು ಕಡಿತದ ಪ್ರತಿರೋಧಕ ಇಂಜೆಕ್ಷನ್ ನೀಡಿಲ್ಲ ಎಂಬುದನ್ನು ನಮಗೆ ತಿಳಿಸಿದರು’ ಎಂದು ಪೋಷಕರು ಆರೋಪಿಸಿದ್ದಾರೆ.

ಹಾವು ಕಡಿತ, ನಾಯಿಕಡಿತ ಮತ್ತು ವಿಷಸೇವನೆ ಸಂದರ್ಭದಲ್ಲಿ ಜೀವ ಉಳಿಸಲು ನೀಡುವ ಪ್ರತಿರಕ್ಷಕ ಔಷಧಯನ್ನು ಎಲ್ಲ ತಾಲ್ಲೂಕು ಆಸ್ಪತ್ರೆಯಲ್ಲಿ ದಾಸ್ತಾನು ಇರಿಸುವುದು ಕಡ್ಡಾಯ ಎಂದು ಸರ್ಕಾರ ಆದೇಶ ನೀಡಿದೆ. ಆದರೆ, ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ನೀಡುವ ಇಂಜೆಕ್ಷನ್ ದಾಸ್ತಾನು ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಹಾವು ಕಡಿತದ ಪ್ರತಿರಕ್ಷಕ ಔಷಧ ದಾಸ್ತಾನಿದೆ. ಮಗುವಿಗೆ ಯಾಕೆ ಈ ಇಂಜೆಕ್ಷನ್ ನೀಡಿಲ್ಲ ಎಂದು ತಿಳಿಯುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ವೈದ್ಯರ ವಿಚಾರಣೆ ನಡೆಸುತ್ತೇನೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಘುರಾಮ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-14-894277358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.