ಚನ್ನಪಟ್ಟಣ: ನಗರದಲ್ಲಿ ಸುರಿದ ಬಿರುಗಾಳಿ ಮಳೆಗೆ ಇಲ್ಲಿನ ಕನಕನಗರದಲ್ಲಿ ವಿದ್ಯುತ್ ಪರಿವರ್ತಕವೊಂದು (ಟ್ರಾನ್ಸ್ಫಾರ್ಮರ್) ಭಾನುವಾರ ಸಂಜೆ ನೆಲಕ್ಕುರುಳಿದೆ.

ತಾಲ್ಲೂಕಿನ ವಿವಿಧೆಡೆಯೂ ಉತ್ತಮ ಮಳೆಯಾಗಿದೆ.

ಬಿರುಗಾಳಿಯ ಅಬ್ಬರಕ್ಕೆ ವಿದ್ಯುತ್ ಪರಿವರ್ತಕದ ಪಕ್ಕದಲ್ಲಿದ್ದ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಸನಿಹದಲ್ಲೇ ಇದ್ದ ಟಿ.ಸಿ ಧಾರಾಶಾಹಿಯಾಗಿದೆ. ವಿದ್ಯುತ್ ತಂತಿಗಳು ತುಂಡರಿಸಿ, ವಿದ್ಯುತ್ ಸರಬರಾಜು ಕಡಿತಗೊಂಡಿದ್ದರಿಂದ ಭಾರಿ ಅನಾಹುತವು ತಪ್ಪಿದೆ.

ವಿದ್ಯುತ್ ಪರಿವರ್ತಕ ನೆಲಕ್ಕುರುಳಿದ್ದರಿಂದ ರಾತ್ರಿಯಿಡಿ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಬೆಸ್ಕಾಂ ಸಿಬ್ಬಂದಿ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ, ಟಿ.ಸಿ ಸರಿಪಡಿಸಿದರು. ವಿದ್ಯುತ್ ಸಂಪರ್ಕ ನೀಡಿದರು. ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-14-858313963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.