ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ತಾಲ್ಲೂಕು ಕಚೇರಿ ಬಳಿ ಶವ ಸಂಸ್ಕಾರಕ್ಕೆ ಯತ್ನ!

ಪರಿಶಿಷ್ಟರ ಅಂತ್ಯಸಂಸ್ಕಾರಕ್ಕೆ ಸವರ್ಣೀಯರ ತಡೆಗೆ ಖಂಡನೆ
Last Updated 5 ಡಿಸೆಂಬರ್ 2022, 21:44 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬ ಹಳ್ಳಿ ಗ್ರಾಮದಲ್ಲಿ ಸೋಮವಾರ ನಿಧನರಾದ ಪರಿಶಿಷ್ಟ ಜಾತಿಯ ಜಯಣ್ಣ (47) ಎಂಬುವರ ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಕೆಲವು ಸವರ್ಣೀಯರು ಅವಕಾಶ ನೀಡಲಿಲ್ಲ ಎಂದು ಶವವನ್ನು ಚನ್ನಪಟ್ಟಣಕ್ಕೆ ಕೊಂಡೊಯ್ದ ಕುಟುಂಬ ಸದಸ್ಯರು ಮತ್ತು ಪರಿಶಿಷ್ಟ ಸಮುದಾಯದವರು ತಾಲ್ಲೂಕು ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ಸಮುದಾಯದ ಕೆಲವು ಯುವಕರು ಶವವನ್ನು ಕಚೇರಿಯ ಆವರಣದಲ್ಲೆ ಸಂಸ್ಕಾರ ಮಾಡಲು ಗುಂಡಿ ತೋಡಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಅಧಿಕಾರಿಗಳ ಮನವೊಲಿಕೆಗೆ ಮಣಿಯದ ಕುಟುಂಬಸ್ಥರು ರಾತ್ರಿ ಯಾದರೂ ಮೃತದೇಹವನ್ನು ಕಚೇರಿ ಬಳಿಯಿಂದ ತೆರವುಗೊಳಿಸಲಿಲ್ಲ. ಪ್ರತ್ಯೇಕ ಸ್ಮಶಾನ ಜಾಗ ಸಿಗುವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು.


‘ಹಲವು ವರ್ಷಗಳಿಂದಲೂ ಕೊಂಡಾಪುರ ಗ್ರಾಮದ ಕೆರೆಯ ಪಕ್ಕದ ಸ್ಮಶಾನದಲ್ಲಿ ಪರಿಶಿಷ್ಟ ಸಮುದಾಯದವರು ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಇತ್ತೀಚಿಗೆ ಕೆಲವು ವ್ಯಕ್ತಿಗಳು ಆ ಜಾಗ ಒತ್ತುವರಿ ಮಾಡಿಕೊಂಡು ಶವ ಸಂಸ್ಕಾರ ನಡೆಸಲು ಅವಕಾಶ ನೀಡುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT