ಚನ್ನಪಟ್ಟಣ: ನಗರದ ಹೌಸಿಂಗ್ ಬೋರ್ಡ್ ಬಡಾವಣೆಗೆ ಸೋಮವಾರ ಬೆಳಿಗ್ಗೆ ನುಗ್ಗಿ ದಾಂದಲೆ ನಡೆಸಿ ನಾಗರಿಕರಲ್ಲಿ ಆತಂಕ ಸೃಷ್ಟಿಸಿದ ಒಂಟಿ ಸಲಗ, ಕಡೆಗೂ ಅರಣ್ಯ ಇಲಾಖೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಸೆರೆಯಾಗಿ ಇದೀಗ ಬಂಡೀಪುರದಲ್ಲಿರುವ ಆನೆ ಶಿಬಿರ ಸೇರಿದೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗದ ದಾಂದಲೆಗೆ ಹಸು ಬಲಿಯಾಗಿದೆ. ಕೌಂಪಾಂಡ್ಗಳು ನೆಲಕ್ಕುರುರಳಿದ್ದು, ರಸ್ತೆಯಲ್ಲಿದ್ದ ಕಾರುಗಳು ಜಖಂಗೊಂಡಿವೆ. ಗುಡಿಸಲು ನೆಲಸಮಗೊಂಡಿದೆ. ಆನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಾಮಪ್ಪ ಮತ್ತು ಗೀತಾ ಎಂಬುವರು ಗಾಯಗೊಂಡಿದ್ದಾರೆ.

ಮೈಕ್ನಲ್ಲಿ ಎಚ್ಚರಿಕೆ: ಉದ್ರಿಕ್ತಗೊಂಡಂತಿದ್ದ ಸಲಗವು ಬಡಾವಣೆಗೆ ಒಂಟಿ ಸಲಗ ಬಡಾವಣೆಯತ್ತ ಬರುತ್ತಿರುವುದನ್ನು ಅರಿತ ಅರಣ್ಯ ಇಲಾಖೆಯವರು ಅದನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಹಾಗೂ ಸಿಬ್ಬಂದಿ, ಬಡಾವಣೆಗೆ ಕಾಡಾನೆ ಬಂದಿರುವ ವಿಷಯವನ್ನು ಮೈಕ್ ಮೂಲಕ ಘೋಷಣೆ ಮಾಡಿದರು. ಯಾರೂ ಮನೆಯಿಂದ ಹೊರಕ್ಕೆ ಬಾರದಂತೆ ಎಚ್ಚರಿಕೆ ನೀಡಿ, ಕಾಡಾನೆ ಚಲನವಲನದ ಮೇಲೆ ನಿಗಾ ಇಟ್ಟರು.

‘ತಾಲ್ಲೂಕಿನ ಕೂಡ್ಲೂರು ಬಳಿಯ ಖಾಸಗಿ ರೆಸಾರ್ಟ್ ಹಿಂಭಾಗ ಭಾನುವಾರ ರಾತ್ರಿ ಕಾಣಿಸಿಕೊಂಡಿದ್ದ ಸಲಗಕ್ಕೆ ಮತ್ತು ಬಂದಿದೆ. ಬೆಳಿಗ್ಗೆ ಕೂಡ್ಲೂರು ಕೆರೆ ದಾಟಿಕೊಂಡು ನಗರದ ಸಮೀಪದ ಮರಳುಹೊಲ ಬಡಾವಣೆಯನ್ನು ಪ್ರವೇಶಿಸಿರುವ ಆನೆ, ನಂತರ ಹೌಸಿಂಗ್ ಬೋರ್ಡ್ ಬಡಾವಣೆಗೆ ಬಂದಿದೆ’ ಎಂದು ಆರ್ಎಫ್ಒ ಮಲ್ಲೇಶ್ ಸುದ್ದಿಗಾರರಿಗೆ ತಿಳಿಸಿದರು.

‘ಸುಣ್ಣಘಟ್ಟ ಬಳಿ ಕಾಣಿಸಿಕೊಂಡಿದ್ದ ಕಾಡಾನೆಗಳ ಗುಂಪಿನೊಂದಿಗೆ ಇದ್ದ ಈ ಆನೆಯು, ಗುಂಪಿನಿಂದ ತಪ್ಪಿಸಿಕೊಂಡು ಏಕಾಂಗಿಯಾಗಿ ಕೂಡ್ಲೂರು ಮತ್ತು ಹೌಸಿಂಗ್ ಬೋರ್ಡ್ನತ್ತ ಬಂದಿದೆ. ಕೂಡಲೇ ಜನರಿಗೆ ಎಚ್ಚರಿಕೆ ನೀಡಿ, ಕಾಡಾನೆ ಮತ್ತಷ್ಟು ಜನವಸತಿ ಪ್ರದೇಶಕ್ಕೆ ಬಾರದಂತೆ ನಿಗಾ ಇಟ್ಟು ಸೆರೆಗೆ ಕಾರ್ಯಾಚರಣೆ ರೂಪಿಸಿ ಸೆರೆ ಹಿಡಿದು ಸ್ಥಳಾಂತರಿಸಲಾಯಿತು’ ಎಂದರು.

ನಿಲ್ಲದ ಹಾವಳಿ: ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜನರು ಭಯಭೀತಿಯಿಂದ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳಿಗ್ಗೆ ಮತ್ತು ಸಂಜೆ ತಮ್ಮ ಜಮೀನುಗಳತ್ತ ಹೋಗಲು ಭಯಪಡುತ್ತಿದ್ದಾರೆ. ಹಳ್ಳಿಗಳ ರಸ್ತೆಯಲ್ಲಿ ಸಂಜೆ ಮತ್ತು ಬೆಳಿಗ್ಗೆ ವಾಹನಗಳಲ್ಲೂ ಓಡಾಡಲು ಹಿಂದೇಟು ಹಾಕುವಂತಾಗಿದೆ.

ಏ. 19ರಂದು ಸುಣ್ಣಘಟ್ಟ ಗ್ರಾಮದ ತೋಟವೊಂದರಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡು ರೈತರ ಬೆಳೆಗಳನ್ನು ಧ್ವಂಸ ಮಾಡಿದ್ದವು. ಅಂದು ಅವುಗಳನ್ನು ಗ್ರಾಮದ ಕೆರೆಯ ಕಡೆಗೆ ಓಡಿಸುವಾಗ ಸಲಗವೊಂದು ಪಟಾಕಿ ಸಿಡಿಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಟ್ಟಿಸಿಸಿಕೊಂಡು ಬಂದಿತ್ತು. ಸಿಬ್ಬಂದಿ ಓಡಿ ತಪ್ಪಿಸಿಕೊಂಡಿದ್ದರು.

ರೈತನ ತಿವಿದಿತ್ತು: ಅದೇ ದಿನ ರಾತ್ರಿ ಕಾಡಾನೆಗಳನ್ನು ಕಾಡಿಗಟ್ಟುವ ವೇಳೆ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ರೈತ ಕಾಂತರಾಜು ಎಂಬುವರ ಮೇಲೆ ಸಲಗ ದಾಳಿ ಮಾಡಿ, ಅವರ ಹೊಟ್ಟೆಗೆ ದಂತದಿಂದ ಇರಿದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಏ. 22ರಂದು ರಾತ್ರಿ ತಾಲ್ಲೂಕಿನ ಬಿ.ವಿ. ಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಕಾಡಾನೆಗಳ ಹಿಂಡು ನುಗ್ಗಿತ್ತು. ತೋಟದಲ್ಲಿದ್ದ ಅಡಿಕೆ, ಬಾಳೆ ತೋಟಗಳನ್ನು ಧ್ವಂಸ ಮಾಡಿತ್ತು.. ಇದರಿಂದ ರೊಚ್ಚಿಗೆದ್ದಿದ್ದ ರೈತರು ಮಾರನೇಯ ದಿನ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ನಂತರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸಿದ್ದರಿಂದ ಪ್ರತಿಭಟನೆ ನಿಲ್ಲಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-14-1686539377

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.