ಶನಿವಾರ, ಸೆಪ್ಟೆಂಬರ್ 19, 2020
22 °C

ಚಿಕೊಪ್ಪ: ಕಾಡಾನೆ ದಾಳಿ, ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಯ್ಯಂಬಳ್ಳಿ (ಕನಕಪುರ): ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಚಿಕ್ಕೊಪ್ಪ ಗ್ರಾಮದಲ್ಲಿ ಕಾಡಾನೆಗಳು ಸೋಮವಾರ ರಾತ್ರಿ ರೈತರ ಜಮೀನಿಗೆ ನುಗ್ಗಿ ಮಾವು ಮತ್ತು ತೆಂಗಿನ ಮರಗಳನ್ನು ನಾಶಮಾಡಿ ಕೊಳವೆಬಾವಿಯ ಪೈಪ್‌ಗಳನ್ನು ಧ್ವಂಸಗೊಳಿಸಿವೆ.

ಚಿಕ್ಕೊಪ್ಪ ಗ್ರಾಮದ ರಾಮೇಗೌಡ, ಚಿಣ್ಣೇಗೌಡ, ಮಾದೇಗೌಡ, ಪುಟ್ಟಮಾದೇಗೌಡ, ಚಂದ್ರುಕುಮಾರ್‌ ಅವರಿಗೆ ಸೇರಿದ ಜಮೀನುಗಳಲ್ಲಿ ಸುಮಾರು 15 ಕಾಡಾನೆಗಳು ಹಿಂಡು ದಾಂದಲೆ ನಡೆಸಿವೆ.

ಆನೆ ದಾಳಿಯಿಂದ ಎಲ್ಲ ರೈತರ ಜಮೀನಿನಲ್ಲಿ ಸುಮಾರು ₹ 15 ಲಕ್ಷದಷ್ಟು ನಷ್ಟವಾಗಿರುವುದಾಗಿ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಗ್ರಾಮಕ್ಕೆ ಬಂದು ಹಾನಿಯಾಗಿರುವ ತೋಟಗಳನ್ನು ವೀಕ್ಷಣೆ ಮಾಡಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

ಕಾಡಾನೆಗಳು ಒಂದು ಕಡೆ ಓಡಿಸಿದರೆ ಮತ್ತೊಂದು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿವೆ. ಸುಮಾರು 15 ದಿನಗಳಿಂದ ಹೂಕುಂದ, ಚಿಕ್ಕೊಪ್ಪ, ಗೊಲ್ಲಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಡುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ಒತ್ತುವರಿ ಸಮಸ್ಯೆ: ಮುನೇಶ್ವರ ಬೆಟ್ಟವು ಸೇರಿದಂತೆ ಸುತ್ತಮುತ್ತಲ ಅರಣ್ಯ ಪ್ರದೇಶವು ವನ್ಯಜೀವಿ ಧಾಮ ಮುಗ್ಗೂರು ಅರಣ್ಯ ಸೇರಿಕೊಂಡಿದೆ. ಇಲ್ಲಿ ಕಾಡನೆಗಳು ಹೆಚ್ಚಾಗಿದ್ದು ಅವುಗಳನ್ನು ತಡೆಗಟ್ಟಲು ಅರಣ್ಯದ ಹಂಚಿನಲ್ಲಿ ಆನೆಕಂದಕ ನಿರ್ಮಾಣ ಮಾಡಿ ಸೋಲಾರ್‌ ತಂತಿ, ರೈಲ್ವೇ ಬ್ಯಾರಿಕೇಡ್‌ನ್ನು ಅಳವಡಿಸಬೇಕಿದೆ. ಆದರೆ ಇಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದ್ದು ಆನೆಕಂದಕ ನಿರ್ಮಾಣ ಮಾಡಲು ರೈತರು ಬಿಡುತ್ತಿಲ್ಲ. ಆನೆಕಂದಕ ನಿರ್ಮಿಸಿ ರೈಲ್ವೇ ಬ್ಯಾರಿಕೇಡ್‌ ಅಳವಡಿಸುವ ತನಕ ಆನೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ವಲಯ ಅರಣ್ಯಾಧಿಕಾರಿ ದಿನೇಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.