ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದಲ್ಲಿ ಕ್ರಿಸ್‌ಮಸ್ ಸಂಭ್ರಮ

ಚರ್ಚ್‌ಗಳಿಗೆ ವಿಶೇಷ ಅಲಂಕಾರ: ಜನಾಕರ್ಷಣೆಯಾದ ಗೋಂದಲಿ
Last Updated 25 ಡಿಸೆಂಬರ್ 2019, 16:27 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಗರದ ರೈಲು ನಿಲ್ದಾಣ ಬಳಿ ಇರುವ ಲೂರ್ದ್‌ ಮಾತೆಯ ಚರ್ಚಿನಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಹಬ್ಬದ ಆಚರಣೆಗಳು ಆರಂಭಗೊಂಡಿದ್ದವು. ಫಾದರ್ ಡೇನಿಯಲ್‌ ಅಲೆಗ್ಸಾಂಡರ್‌ ನೇತೃತ್ವದಲ್ಲಿ ರಾತ್ರಿ 11.30ಕ್ಕೆ ಕ್ರಿಸ್‌ಮಸ್ ಗೀತೆಗಳನ್ನು ಹಾಡುವ ಮೂಲಕ ಚಾಲನೆ ದೊರೆಯಿತು. ರಾತ್ರಿ 12ಕ್ಕೆ ಬಾಲ ಏಸುವಿನ ಸ್ವರೂಪವನ್ನು ಸಾರುವ ಗೋಂದಲಿಯನ್ನು ಅನಾವರಣಗೊಳಿಸಲಾಯಿತು. ಬಳಿಕ ಏಸುವಿಗೆ ಪೂಜೆ ಸಲ್ಲಸಲಾಯಿತು. ‘ಜಗದಲ್ಲಿ ಶಾಂತಿ ನೆಲೆಸಲಿ. ಎಲ್ಲ ದುಃಖಿತರ ದುಃಖಗಳು ದೂರವಾಗಿ ಸುಖ–ನೆಮ್ಮದಿ’ ದೊರಕಲಿ ಎಂದು ಕೋರಿ ರಾತ್ರಿ 2 ಗಂಟೆಯವರೆಗೆ ಪ್ರಾರ್ಥನೆ ನಡೆಯಿತು. ನಂತರದಲ್ಲಿ ಕೇಕ್‌ ಕತ್ತರಿಸಿ ಎಲ್ಲರಿಗೂ ಹಂಚಲಾಯಿತು.

ಬೆಳಗ್ಗೆಯೂ ನೂರಾರು ಮಂದಿ ಚರ್ಚ್‌ಗೆ ಭೇಟಿ ನೀಡಿ ಗೋಂದಲಿಯನ್ನು ವೀಕ್ಷಣೆ ಮಾಡಿದರು. ಅಣಬೆ ಆಕೃತಿ ಸೃಜಿಸಿ ನಿರ್ಮಿಸಲಾದ ಗೋಂದಲಿ ಜನಾಕರ್ಷಣೆಯ ಕೇಂದ್ರವಾಗಿತ್ತು. ಮಕ್ಕಳು ಚರ್ಚ್‌ನ ಆವರಣದಲ್ಲಿ ಮೊಂಬತ್ತಿಗಳನ್ನು ಬೆಳಗಿ ಕ್ರಿಸ್ತನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ನನ್ನು ವಿದ್ಯುತ್‌ ದೀಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ನಗರಸಭೆ ಎದುರು ಇರುವ ಸಂತ ಥಾಮಸ್‌ ಚರ್ಚ್‌ನಲ್ಲಿ ಪ್ರೊಟಸ್ಟಂಟ್‌ ಪಂಗಡದ ಕ್ರಿಶ್ಚಿಯನ್ನರಿಂದ ಕ್ರಿಸ್‌ಮಸ್ ಆಚರಿಸಲಾಯಿತು. ದೇಗುಲದ ಹೊರಗೆ ಏಸುವಿನ ಬಾಲಲೀಲೆಯನ್ನು ಸಾರುವ ಗೋಂದಲಿಯನ್ನು ನಿರ್ಮಿಸಲಾಗಿತ್ತು. ಅನ್ಯ ಧರ್ಮಿಯರೂ ಚರ್ಚ್‌ಗೆ ಭೇಟಿ ನೀಡಿ ಶುಭಾಶಯ ಕೋರಿದರು. ಕ್ರಿಶ್ಚಿಯನ್ ಸಮಯದಾಯದವರು ಮನೆಗಳಲ್ಲಿಯೂ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT