ಶುಕ್ರವಾರ, ನವೆಂಬರ್ 15, 2019
20 °C

‘ಸ್ವಚ್ಛ ಭಾರತ ನಿರ್ಮಾಣಕ್ಕೆ ಕೈಜೋಡಿಸಿ’

Published:
Updated:
Prajavani

ಚನ್ನಪಟ್ಟಣ: ಸ್ವಚ್ಛ ಮತ್ತು ಸದೃಢ ಭಾರತ ನಿರ್ಮಿಸಲು ಯುವ ಸಮುದಾಯ ಪಣತೊಡಬೇಕು ಎಂದು ತಾಲ್ಲೂಕು ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಎಚ್ ನಾಗರಾಜು ಸಲಹೆ ನೀಡಿದರು.

ತಾಲ್ಲೂಕಿನ ಮಳೂರು ಹೋಬಳಿ ಗೋವಿಂದಹಳ್ಳಿ ಗ್ರಾಮದಲ್ಲಿ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಜನರು ದುಶ್ಚಟಗಳಿಗೆ ಬಲಿಯಾಗದೆ ಸನ್ನಡತೆ ರೂಢಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು. ಸೇವಾ ಮನೋಭಾವ ರೂಢಿಸಿಕೊಳ್ಳುವ ಅಗತ್ಯವಿದೆ ಇದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ಇಂದಿನ ಯುವ ಸಮುದಾಯ ಮೊಬೈಲ್ ಗೀಳಿಗೆ ಒಳಗಾಗದೆ ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು. ಸಮಾಜಮುಖಿ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ರಾಹುಲ್ ರಾಜೇ ಅರಸ್ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಬಿ.ವಿ.ಜಯರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒ ಜಿ.ಆರ್.ಚಂದ್ರಶೇಖರ್, ಮುಖಂಡರಾದ ಪಟೇಲ್ ಪುಟ್ಟರಾಜು, ಸಿದ್ದಪ್ಪಾಜಿ, ಗುರುಲಿಂಗೇಗೌಡ, ಚಿಕ್ಕಮಾಯಿಗಯ್ಯ, ಜಿ.ಕೆ.ಪುಟ್ಟೆಗೌಡ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಮೂರ್ತಿ, ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್.ಆದರ್ಶಕುಮಾರ್, ಖಜಾಂಚಿ ಬಿ.ಎಸ್.ಹೇಮಲತಾ, ಶಿಬಿರಾಧಿಕಾರಿ ಎಚ್.ಸಿ.ಹೊಳಸಾಲಯ್ಯ, ಸಹ ಶಿಬಿರಾಧಿಕಾರಿಗಳಾದ ಎಂ.ಆರ್. ಭವ್ಯ, ಪ್ರವೀಣ್ ಕುಮಾರ್, ಯೋಗಾನಂದ್, ಉಪನ್ಯಾಸಕರಾದ ಟಿ.ಸೌಮ್ಯ, ಟಿ.ಪಿ.ಚನ್ನಂಕೇಗೌಡ, ಕೆ.ಶೃತಿ, ಸಿಬ್ಬಂದಿಗಳಾದ ಅಭಿಲಾಷ್, ರೂಪಾ ಇದ್ದರು.

ಪ್ರತಿಕ್ರಿಯಿಸಿ (+)