ಶುಕ್ರವಾರ, ನವೆಂಬರ್ 22, 2019
23 °C

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎಸ್. ಸುರೇಂದ್ರನಾಥ ಶರ್ಮ ಆಯ್ಕೆ

Published:
Updated:
Prajavani

ಕಸಬಾ(ರಾಮನಗರ): ಇಲ್ಲಿನ ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಸ್. ಸುರೇಂದ್ರನಾಥಶರ್ಮ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಎಸ್. ಉಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಎಚ್.ಎಸ್. ಸುರೇಂದ್ರನಾಥಶರ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೀರ್ತಿಕುಮಾರ್ ಘೋಷಿಸಿದರು. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಲ್.ಪ್ರಕಾಶ್ ಚುನಾವಣಾ ಪ್ರಕ್ರಿಯೆಯಲ್ಲಿ ಇದ್ದರು.

‘ಸಾರ್ವಜನಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ಸಹಕಾರಿ ಕ್ಷೇತ್ರ ಉತ್ತಮ ಕ್ಷೇತ್ರವಾಗಿದೆ. ಆ ನಿಟ್ಟಿನಲ್ಲಿ ನನಗೆ ಸಿಕ್ಕಿರುವ ಸಮಯದಲ್ಲಿ ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ಸೇವೆ ಸಲ್ಲಿಸುತ್ತೇನೆ’ ಎಂದು ಸುರೇಂದ್ರನಾಥ ಶರ್ಮ ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಗಿರಿಜಮ್ಮ, ನಿರ್ದೇಶಕರಾದ ಕೆ.ಎಸ್.ಉಮೇಶ್, ಎಸ್.ಗಂಗಾಧರಯ್ಯ (ಗುಂಡಪ್ಪ), ಕೆ.ಚಂದ್ರಯ್ಯ, ಉಮಾಶಂಕರ್, ಶಿವಪ್ಪ, ಗಂಗಾಧರಚಾರ್, ಆಂಜನಾಚಾರ್, ನಾಗರಾಜಯ್ಯ, ದೊಡ್ಡರಂಗನಾಯ್ಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹದೇವಯ್ಯ, ಸದಸ್ಯ ಕೃಷ್ಣಪ್ಪ, ಮುಖಂಡರಾದ ಎಸ್.ಆರ್. ರಾಮಕೃಷ್ಣಯ್ಯ, ಜಯರಾಮಯ್ಯ, ಎಸ್.ಬಿ. ಬೈರಪ್ಪ ಇದ್ದರು.

ಪ್ರತಿಕ್ರಿಯಿಸಿ (+)