ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತrಕಾಲೇಜು ವಾಲಿಬಾಲ್ ಪಂದ್ಯಾವಳಿ

Last Updated 14 ಅಕ್ಟೋಬರ್ 2019, 21:34 IST
ಅಕ್ಷರ ಗಾತ್ರ

ಬಿಡದಿ: ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ವಿಕಾಸ ವಿದ್ಯಾ ಸಂಘ ಹಾಗೂ ಜ್ಞಾನ ವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡಿ ಅಂಡ್ ಕಾಮರ್ಸ್‌ನ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಅಂತರ್ ಕಾಲೇಜು ವಾಲಿಬಾಲ್ ಪಂದ್ಯವಳಿಯನ್ನು ಶಾಸಕ ಎ.ಮಂಜುನಾಥ್ ಉದ್ಘಾಟಿಸಿದರು.

ಅವರು ಮಾತನಾಡಿ, ವಾಲಿಬಾಲ್ ಕ್ರೀಡೆಯು ಬಿಡದಿಯಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಲ್ಲಿನ ಕ್ರೀಡಾ ಪಟುಗಳು ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ ಭಾಗದಲ್ಲಿ ವಾಲಿಬಾಲ್ ಗೆ ವಿಶಿಷ್ಟ ಛಾಪು ಇದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 40 ಕಾಲೇಜುಗಳು ಭಾಗವಹಿಸುತ್ತಿವೆ. ಎರಡು ದಿನಗಳ ಕಾಲ ಈ ಪಂದ್ಯಾವಳಿಯು ಜ್ಞಾನವಿಕಾಸ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. ಮನುಷ್ಯನು ಉತ್ತಮ ಆರೋಗ್ಯ ಪಡೆಯಲು ಕ್ರೀಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಲಿಂಗರಾಜು ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಬರುವ ಅನುದಾನದಲ್ಲಿ ನೇರವಾಗಿ ಕಾಲೇಜುಗಳಿಗೆ 30 ರಷ್ಟು ಹಣವನ್ನು ವರ್ಗಾಯಿಸುವುದಕ್ಕೆ ಈಗಾಗಲೇ ಅನುಮತಿ ಪಡೆಯಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ ಶುಭ ಕೋರಿದರು. ಜ್ಞಾನ ವಿಕಾಸ ವಿದ್ಯಾಸಂಘದ ನಿರ್ದೇಶಕರಾದ ಎಲ್.ಸತೀಶ್ ಚಂದ್ರ, ಬಿ.ಎನ್ . ಗಂಗಾಧರಯ್ಯ, ಹಾಗೂ ಕಾರ್ಯದರ್ಶಿ ಬಿ.ಎನ್ ನಾಗರಾಜು, ಪ್ರಾಂಶುಪಾಲ ರಾಮ್ ಪ್ರಸಾದ್, ಜೆ.ವಿ.ಐ.ಎಂ.ಎಸ್.ಸಿ ಪ್ರಾಂಶುಪಾಲರಾದ ಟಿ.ರೂಪ, ಜಿ.ಎಚ್ ರಾಮಯ್ಯ ಹಾಗೂ ವಿವಿಧ ಕಾಲೇಜಿನ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಹಾಗೂ ಶಾಲೆಯ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT