ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವೇ ಕುಟುಂಬ ಮಾಡಿಕೊಂಡಿದ್ದ ಪೇಜಾವರ ಶ್ರೀ 

Last Updated 30 ಡಿಸೆಂಬರ್ 2019, 14:26 IST
ಅಕ್ಷರ ಗಾತ್ರ

ದೇವನಹಳ್ಳಿ: ಶ್ರೀಕೃಷ್ಣ ದೇವರ ಪರಮ ಭಕ್ತ ಪೇಜಾವರದ ವಿಶ್ವೇಶತೀರ್ಥರು ವಿಶ್ವವೇ ಒಂದು ಕುಟುಂಬ ಮಾಡಿಕೊಂಡಿದ್ದರು ಎಂದು ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು. ನಾಗರಾಜ್ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಸೋಮವಾರ ತಾಲ್ಲೂಕು ಬಿಜೆಪಿವತಿಯಿಂದ ಆಟಲ್ ಬಿಹಾರಿ ವಾಜಪೇಯಿರವರ 96ನೇ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕರ್ತರಿಂದ ಸ್ವಯ ಪ್ರೇರಿತ ರಕ್ತದಾನ ಶಿಬಿರ ಮತ್ತು ಇತ್ತೀಚೆಗೆ ನಿಧನರಾದ ಪೇಜಾವರ ಶ್ರೀಗಳ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ದಲಿತರ ಕೇರಿಗಳಿಗೆ ಹೋಗಿ ದಲಿತರನ್ನು ಸಂಸ್ಕಾರವಂತರಾಗಿ ಮಾಡಿದ್ದರು. ಕಠಿಣ ಹಿಂದುತ್ವವಾದಿಯಾಗಿದ್ದರೂ ಯಾವುದೇ ಧರ್ಮವನ್ನು ದ್ವೇಷಿಸಿದವರಲ್ಲ, ಆಯೋಧ್ಯೆಯ ರಾಮ ಜನ್ಮಭೂಮಿ ವಿಚಾರದಲ್ಲಿ ಗಟ್ಟಿ ಧ್ವನಿಯಾಗಿದ್ದರು. ಬದುಕಿರುವಾಗಲೇ ರಾಮಜನ್ಮ ಭೂಮಿ ವ್ಯಾಜ್ಯಬಗೆ ಹರಿದು ಸಂತಸವಾದರೂ ದೇಶ ಒಬ್ಬ ಕಟ್ಟ ಹಿಂದುತ್ವವಾದಿಯನ್ನು ಕಳೆದು ಕೊಂಡಿರುವುದು ತುಂಬಲಾರದ ಹಿಂದೂ ಸಮಾಜಕ್ಕೆ ನಷ್ಟ ಆಗಿದೆ’ ಎಂದು ಹೇಳಿದರು.

ಬಿಜೆಪಿ.ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ‘ವಿಶ್ವವೇ ಕೊಂಡಾಡುವಂತಹ ಶ್ರೀಗಳನ್ನ ನಾವು ಕಳೆದುಕೊಂಡಿದ್ದೇವೆ. ಅನೇಕ ಜಟಿಲ ಸಮಸ್ಯೆಗಳನ್ನು ಸರ್ವಧರ್ಮದ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಬಗೆ ಹರಿಸುತ್ತಿದ್ದರು ಅವರ ದಿನಚರಿ, ಕರ್ತವ್ಯ ನಿಷ್ಠೆ, ಸಮಯ ಪಾಲನೆ, ಗೋಮಾತೆಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಭಕ್ತಿ ನಿಷ್ಠೆ ಇತರ ಸ್ವಾಮಿಜಿಗಳಿಗೆ ಮಾದರಿ ಎಂದು ಹೇಳಿದರು.

ಬಿಜೆಪಿ ಮುಖಂಡ ನಾರಾಯಣಗೌಡ ಮಾತನಾಡಿ, ‘ಪೇಜಾವರ ಶ್ರೀಗಳು ಅಯೊಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುವುದನ್ನು ನೋಡಬೇಕು ಎಂದು ಆಸೆಪಟ್ಟಿದ್ದರು. ರಾಮ ಮಂದಿರಕ್ಕೆ ಆಡಿಗಲ್ಲು ಹಾಕುವ ಮೊದಲೇ ದೇಹ ತ್ಯಾಗ ಮಾಡಿದ್ದು ಅಸಂಖ್ಯಾತ ಭಕ್ತರಿಗೆ ನೋವಾಗಿದೆ’ ಎಂದು ಹೇಳಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೊಮ್ಮವಾರ ಸುನೀಲ್ ಮಾತನಾಡಿ, ‘ಕಾಯಕ ನಿರತ, ಪ್ರವಚನಕಾರ, ಮೃದು ಮಾತಿನಲ್ಲೆ ಎಂತಹ ಕಠಿಣ ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ಪಡೆದು ಎಲ್ಲ ಧರ್ಮೀಯರು ಮೆಚ್ಚುವಂತಹ ಜಟಿಲ ಸಮಸ್ಯೆನ್ನು ಬಗೆಹರಿಸಿ ಮಠದಿಂದ ಆತಿಥ್ಯ ನೀಡಿ ಶಾಲು ಹೊದಿಸಿ ಸನ್ಮಾನಿಸುತ್ತಿದ್ದ ಶ್ರೀಗಳು ಅವರ ನುಡಿಗೆ ಮರುಳಾಗದವರಿಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿಯೂ ರಾಜ್ಯ ಮತ್ತು ಹೊರ ರಾಜ್ಯಗಳ ಸಂತ್ರಸ್ಥರಿಗೆ ಸಾಂತ್ವನದ ಜೊತೆಗೆ ದವಸ ಧಾನ್ಯ ನೀಡಿ ವಸತಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಸರ್ಕಾರ ಮಾಡದ ಆನೇಕ ಕೆಲಸಗಳನ್ನು ಶ್ರೀಗಳು ಮಾಡಿದ್ದಾರೆ. ಅವರು ಮತ್ತೊಮ್ಮೆ ಹುಟ್ಟಿ ಪವಿತ್ರ ಮಠಕ್ಕೆ ಬರಲಿ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷದ ಸದಸ್ಯ ಎ.ಸಿ.ಗುರುಸ್ವಾಮಿ, ಬಿಜೆಪಿ ಜಿಲ್ಲಾ ಎಸ್ಟಿ ಮೊರ್ಚ ಅಧ್ಯಕ್ಷ ತಮ್ಮಯ್ಯ, ಹೈಕೋರ್ಟ್ ವಕೀಲ ಡಿ.ಸಿ.ನಾರಾಯಣಸ್ವಾಮಿ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ನಿಲೇರಿ ಮಂಜುನಾಥ್, ರವಿಕುಮಾರ್, ಕಾರ್ಯದರ್ಶಿ ಬೂದಿಗೆರೆ ನಾರಾಯಣಸ್ವಾಮಿ, ಬಿಜೆಪಿ ಮಹಿಳಾ ಮೊರ್ಚ ಅಧ್ಯಕ್ಷೆ ನಾಗವೇಣಿ, ಪ್ರಧಾನ ಕಾರ್ಯದರ್ಶಿ ವಿಮಲಾ, ಟಾನ್ ಘಟಕ ಅಧ್ಯಕ್ಷ ರಮೇಶ್ ಕುಮಾರ್, ಮುಖಂಡರಾದ ಎ.ವಿ.ನಾರಾಯಣಸ್ವಾಮಿ, ಕೇಶವ ಶಿವಪ್ರಸಾದ್, ರಂಗಸ್ವಾಮಿ, ಕನಕರಾಜು, ಬಿಜೆಪಿ ಎಸ್ಸಿ ಮೊರ್ಚ ಅಧ್ಯಕ್ಷ ಮುನಿಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT