ಸೋಮವಾರ, ಡಿಸೆಂಬರ್ 9, 2019
20 °C

ಹೊಸಕೋಟೆಯಲ್ಲಿ ಕುಕ್ಕರ್, ಹಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ತಾಲ್ಲೂಕಿನ ಉಪ ಚುನಾವಣೆಯ ಹಿನ್ನಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಾಲ್ಲೂಕಿನಲ್ಲಿ ಹಣ ಮತ್ತು ಕುಕ್ಕರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಇಟ್ಟಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಮನೆಮನೆಗೆ ವಿತರಿಸಲು ಅಲೀಂ ಪಾಷಾ ಎಂಬುವರ ಮನೆಯಲ್ಲಿ ಇರಿಸಿದ್ದ 53 ಕುಕ್ಕರ್ ಗಳನ್ನು ವಿಚಕ್ಷಣ ದಳದ ಅಧಿಕಾರಿ ಶ್ರೀನಿವಾಸಯ್ಯ ಮತ್ತು ನಂದಗುಡಿ ಪಿಎಸ್ಐ ಲಕ್ಷ್ಮಿನಾರಾಯಣ್ ಅವರ ತಂಡ ವಶಕ್ಕೆ ಪಡೆದು ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿದೆ.

ಮತ್ತೊಂದು ಪ್ರಕರಣದಲ್ಲಿ ನಗರದ ಕೆಇಬಿ ಸರ್ಕಲ್ ಬಳಿ ಪರಿಶೀಲಿಸಿದ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ₹ 7.50 ಲಕ್ಷ  ನಗದನ್ನು ನಗರದ ಪಿಎಸ್ಐ ರಾಜು ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಗೋವಿಂದರಾಜು ಮತ್ತು ವೇಣುಗೋಪಾಲ್ ದೇವನಹಳ್ಳಿ ತಾಲ್ಲೂಕಿನವರಾಗಿದ್ದು ಹಣಕ್ಕೆ ದಾಖಲೆಯಿಲ್ಲದ ಕಾರಣ ಹಣವನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)