ಫೋಟೊ ವೈರಲ್‌: ಮರ್ಯಾದೆಗೆ ಅಂಜಿ ದಂಪತಿ ನೇಣಿಗೆ

ಬುಧವಾರ, ಜೂನ್ 26, 2019
29 °C

ಫೋಟೊ ವೈರಲ್‌: ಮರ್ಯಾದೆಗೆ ಅಂಜಿ ದಂಪತಿ ನೇಣಿಗೆ

Published:
Updated:

ಚನ್ನಪಟ್ಟಣ: ತಾಲ್ಲೂಕಿನ ಸಾದಾರಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಮಾರ್ಯಾದೆಗೆ ಅಂಜಿ ದಂಪತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಗ್ರಾಮದ ಲೋಕೇಶ್ (29) ಹಾಗೂ ಕೌಶಲ್ಯ (24) ನೇಣಿಗೆ ಶರಣಾದವರು. ಗ್ರಾಮದ ತ್ಯಾಗರಾಜ್ ಎಂಬಾತ ಕೌಶಲ್ಯ ಜೊತೆಗೆ ಇದ್ದ ಕೆಲವು ಭಾವಚಿತ್ರಗಳನ್ನು ಆಕೆಯ ಪತಿ ಲೋಕೇಶ್ ಹಾಗೂ ಗ್ರಾಮದ ಕೆಲವರ ಮೊಬೈಲ್ ಗೆ ಕಳುಹಿಸಿದ್ದ ಎಂದು ತಿಳಿದುಬಂದಿದ್ದು, ಈ ವಿಷಯ ಗ್ರಾಮದಲ್ಲಿ ಚರ್ಚೆಯಾಗುತ್ತಿತ್ತು. ಇದರಿಂದ ಅಂಜಿದ ದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ದಂಪತಿ ಸಾವಿಗೆ ತ್ಯಾಗರಾಜ ಕಾರಣ ಎಂಬ ವಿಷಯ ತಿಳಿದ ಗ್ರಾಮದ ಕೆಲವರು ರೊಚ್ಚಿಗೆದ್ದು, ಆತನ ಮನೆಗೆ ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು, ಎರಡು ಕಾರು, ಒಂದು ಟ್ರ್ಯಾಕ್ಟರ್ ಸುಟ್ಟು ಕರಕಲಾಗಿವೆ. ಘಟನೆ ನಡೆದ ತಕ್ಷಣ ಮನೆಯಲ್ಲಿದ್ದವರು ಪರಾರಿಯಾಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.

ತ್ಯಾಗರಾಜನನ್ನು ಇಷ್ಟ ಪಟ್ಟಿದ್ದ ಕೌಶಲ್ಯ ಕೆಲವು ದಿನಗಳ ಹಿಂದೆ ಆತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಮತ್ತೆ ನಿನ್ನೆಯಷ್ಟೆ ಗ್ರಾಮಕ್ಕೆ ವಾಪಸಾಗಿದ್ದಳು ಎಂದು ತಿಳಿದುಬಂದಿದ್ದು, ತ್ಯಾಗರಾಜ ಆಕೆಯ ಜೊತೆಗಿದ್ದ ಭಾವಚಿತ್ರಗಳನ್ನು ಆಕೆಯ ಪತಿ ಹಾಗೂ ಗ್ರಾಮದ ಕೆಲವರ ಮೊಬೈಲ್ ಗೆ ಕಳುಹಿಸಿದ್ದೆ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತಾಲ್ಲೂಕಿನ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !