ಮಾಗಡಿ: ಕಾವೇರಿ ನೀರನ್ನು ದಾಬಸ್ಪೇಟೆ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಸರ್ಕಾರದ ಯೋಜನೆಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.

ಮೊದಲು ಮಾಗಡಿ ತಾಲ್ಲೂಕಿನ ಜನರಿಗೆ ಮತ್ತು ಕೆರೆಗಳಿಗೆ ಕಾವೇರಿ ನೀರು ಒದಗಿಸಿ ನಂತರ ಬೇರೆಯವರಿಗೆ ಕೊಡಿ ಎಂದು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ನಮ್ಮ ತಾಲೂಕಿಗೆ ನೀರು ಕೊಟ್ಟ ನಂತರವಷ್ಟೇ ಬೇರೆ ಜಿಲ್ಲೆಗೆ ನೀರು ಹರಿಸಲು ಅವಕಾಶ ನೀಡಲಾಗುವುದು. ಏಪ್ರಿಲ್ 17ರೊಳಗೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ರೈತ ಸಂಘದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಏ. 17ರಂದು ಹೊಸಪೇಟೆ ಗೇಟ್ ಬಳಿ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಯುವ ಘಟಕ ಅಧ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ಚಂದ್ರಾಯಪ್ಪ, ನಾರಾಯಣ್, ಕಾಂತರಾಜು, ರಾಮಣ್ಣ, ವೆಂಕಟೇಶ್, ಮುನಿರಾಜ್, ನಿಂಗಣ್ಣ, ಶಿವಲಿಂಗಯ್ಯ, ಕರಿಯಪ್ಪ, ಚಿಕ್ಕಣ್ಣ, ಅಂಜಿನಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-15-554001170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.