ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಮಳೆಗೆ ಹಾನಿ: ಪರಿಹಾರಕ್ಕೆ ಮನವಿ

Last Updated 2 ಮೇ 2022, 15:26 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಕೆಲವು ಗ್ರಾಮಗಳಲ್ಲಿ ಮನೆಗಳ ಹೆಂಚು, ಶೀಟ್ ಹಾರಿಹೋಗಿದ್ದರೆ, ಕೆಲವೆಡೆ ವಿದ್ಯುತ್ ಕಂಬಗಳು, ತೆಂಗು ಸೇರಿದಂತೆ ಮರಗಳು ನೆಲಕಚ್ಚಿವೆ.

ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಪದ್ಮಮ್ಮ ಲೇಟ್ ವೆಂಕಟಪ್ಪ ಅವರ ಶೀಟು ಮನೆ ಮತ್ತು ಗರಿ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು ಮನೆಗೆ ಹಾನಿಯಾಗಿದೆ. ತಾಲ್ಲೂಕಿನ ಕನ್ನಮಂಗಲ, ಅಂಗರಹಳ್ಳಿ, ದಶವಾರ, ಎಲೆಹೊಸಳ್ಳಿ, ಗೊಲ್ಲಳ್ಳಿದೊಡ್ಡಿ ಗ್ರಾಮದಲ್ಲಿ ಶೀಟಿನ ಮನೆ, ಹೆಂಚಿನ ಮನೆಗಳಿಗೆ ಹಾನಿಯಾಗಿದೆ. ಹಸುವಿನ ಮೇಲೆ ತೆಂಗಿನ ಮರ ಬಿದ್ದಿದೆ, ಕೊಟ್ಟಿಗೆ ಶೆಡ್ ಹಾನಿಯಾಗಿದೆ.

ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಉರುಳಿದ ಪರಿಣಾಮ ವಿದ್ಯುತ್ ಕಡಿತಗೊಂಡಿದೆ. ಉರುಳಿ ಬಿದ್ದಿದ್ದ ವಿದ್ಯುತ್‌ ಕಂಬಗಳನ್ನು ಬೆಸ್ಕಾಂ ಸಿಬ್ಬಂದಿ ಸೋಮವಾರ ಸರಿಪಡಿಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಗುಡಿಸಲುಗಳು, ದನದ ಕೊಟ್ಟಿಗೆಗಳು ಬಿರುಗಾಳಿಯ ಆರ್ಭಟಕ್ಕೆ ಸಿಲುಕಿ ಕುಸಿದು ಬಿದ್ದಿವೆ. ತಾಲೂಕಿನಲ್ಲಿ ಸಾಕಷ್ಟು ನಷ್ಟ ಸಂಭವಿಸಿದ್ದು ತಾಲ್ಲೂಕು ಆಡಳಿತ ಪರಿಹಾರ ನೀಡಬೇಕು ಎಂದು ನಷ್ಟ ಅನುಭವಿಸಿರುವ ಕುಟುಂಬಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT