ಬುಧವಾರ, ಜುಲೈ 28, 2021
21 °C

ಮಳೆಯ ಸಿಂಚನ: ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂಗಾರಿನ ಕಳೆ ಮೈದುಂಬಿದೆ. ಶನಿವಾರ ರಾತ್ರಿ ರಾಮನಗರದಲ್ಲಿ ಆಗಾಗ್ಗೆ ವರ್ಷಧಾರೆ ಸುರಿಯಿತು. ಭಾನುವಾರವೂ ಮಳೆ ಮುಂದುವರಿದಿತ್ತು. ಆಗಸದಲ್ಲಿ ಮೋಡಗಳು ದಟ್ಟೈಸಿ ತಂಪಾದ ವಾತಾವರಣ ಇತ್ತು. ಶನಿವಾರ ರಾತ್ರಿ ಕನಕಪುರ ತಾಲ್ಲೂಕಿನಲ್ಲಿ 23ಮಿ.ಮೀ, ಮಾಗಡಿಯಲ್ಲಿ 6, ಚನ್ನಪಟ್ಟಣದಲ್ಲಿ 26 ಹಾಗೂ ರಾಮನಗರದಲ್ಲಿ 28 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.

ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ಮನೆಗಳಿಗೂ ಹಾನಿಯಾಗಿದೆ. ಕೈಲಾಂಚ ಹೋಬಳಿ ಅಚ್ಚಲುದೊಡ್ಡಿ ಗ್ರಾಮದ ಶಿವನಾಗ ಎಂಬುವರ ಮನೆ ಮೇಲ್ಛಾವಣಿ ಮಳೆ ಗಾಳಿಗೆ ಹಾರಿಹೋಗಿದೆ. ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿನ ಪೀಠೋಪಕರಣಗಳು ಹಾನಿಗೀಡಾಗಿವೆ. ಆದರೆ, ಯಾರಿಗೂ ತೊಂದರೆ ಆಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು