ಮಂಗಳವಾರ, ಜೂನ್ 28, 2022
25 °C

ಪ್ರಿಯಕರನ ಜೊತೆ ಮನೆ ಬಿಟ್ಟು ಹೋದ ಮಗಳು: ಮದುವೆ ಫೋಟೊ ನೋಡಿ ಪೋಷಕರ ಆತ್ಮಹತ್ಯೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಮ್ಮ ವಿರೋಧದ ನಡುವೆಯೂ ಮಗಳು ಯುವಕನನ್ನು ಮದುವೆಯಾದ ಕಾರಣಕ್ಕೆ ಮನನೊಂದು ಪೋಷಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ತಾಲ್ಲೂಕಿನ ತೆಂಕನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಎಚ್. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಮೇಶ್ ಹಾಗೂ ಅವರ ಪತ್ನಿ ಶೈಲಜಾ ಮೃತರು. ಇವರ ಪುತ್ರಿ ಅದೇ ಗ್ರಾಮದ ಆಟೊ ಚಾಲಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಪೋಷಕರಿಗೆ ತಿಳಿದು ರಾಜೀ ಸಂಧಾನ ನಡೆದಿತ್ತು.

ಆದರೆ, ಮೂರು ದಿನದ ಹಿಂದೆ ಯುವತಿ ತನ್ನ ಪ್ರಿಯಕರನ ಜೊತೆ ಮನೆ ಬಿಟ್ಟು ತೆರಳಿದ್ದಳು. ಆತನನ್ನೇ ವಿವಾಹ ಆಗಿರುವುದಾಗಿ ಸೋಮವಾರ ಪೋಷಕರಿಗೆ ವಾಟ್ಸ್‌ಆ್ಯಪ್‌ ಮೂಲಕ ಫೋಟೊ ಕಳುಹಿಸಿದ್ದಳು. ಇದನ್ನು ನೋಡಿದ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಪೋಷಕರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು