ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿ ನೆಪದಲ್ಲಿ ಮರಗಳ ಮಾರಣಹೋಮ

Last Updated 21 ಸೆಪ್ಟೆಂಬರ್ 2021, 5:09 IST
ಅಕ್ಷರ ಗಾತ್ರ

ಕುದೂರು(ಮಾಗಡಿ): ಗ್ರಾಮದ ಎಂ.ಜಿ. ರಸ್ತೆಯಲ್ಲಿದ್ದ ಐದು ಮರಗಳನ್ನು ರಸ್ತೆ ದುರಸ್ತಿ ನೆಪದಲ್ಲಿ ಹರಾಜು ಮಾಡಿ ಕತ್ತರಿಸಲಾಗುತ್ತಿದೆ.

ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡಿದ್ದ ಮರಗಳನ್ನು ಕತ್ತರಿಸುತ್ತಿರುವುದರಿಂದ ಗೂಡುಗಳಲ್ಲಿದ್ದ ಮರಿಗಳನ್ನು ರಕ್ಷಿಸಲು ಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಲೋಕೋಪಯೋಗಿ ಇಲಾಖೆಗೆ ಸೇರಿರುವ ರಸ್ತೆಯಲ್ಲಿ ಮರಗಳ ಮಾರಣಹೋಮ ನಡೆದಿದೆ.

ಗ್ರಾಮದಲ್ಲಿ ಮರಗಳನ್ನು ಕತ್ತರಿಸಿರುವುದರಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮರಗಳನ್ನು ಕತ್ತರಿಸದೆ ರಸ್ತೆ ದುರಸ್ತಿ ಮಾಡಿಸಬಹುದಿತ್ತು. ವಿವೇಚನೆ ಇಲ್ಲದ ಅಧಿಕಾರಿಗಳು ಪರಿಸರ ರಕ್ಷಿಸುವ ಬದಲು ನಾಶ ಮಾಡುತ್ತಿದ್ದಾರೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT