ಭಾನುವಾರ, ಫೆಬ್ರವರಿ 23, 2020
19 °C

ಜಿಂಕೆ ಬೇಟೆ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾತನೂರು (ಕನಕಪುರ): ಇಲ್ಲಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂಹಳ್ಳಿ ಶಾಖೆಯ ಹರಿಹರ ಗಸ್ತಿನ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಸಾತನೂರು ಹೋಬಳಿ ಸಂಬಾಪುರ ಗ್ರಾಮದ ನಾಥೇಗೌಡರ ಮಗ ಸುರೇಶ್‌ ಬಂಧಿತ ಆರೋಪಿ. ಸಂಗಮ ವನ್ಯಜೀವ ವಲಯದಲ್ಲಿನ ಅರಣ್ಯ ಪ್ರದೇಶದ ತಟ್ಟೆಹಳ್ಳದಲ್ಲಿ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ.

ಎಸಿಎಫ್‌ ರಾಜು, ಆರ್‌ಎಫ್‌ಒ ಕಿರಣ್‌ಕುಮಾರ್‌ ಕರತಂಗಿ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ಅನಿಲ್‌ಕುಮಾರ್‌, ಅರಣ್ಯ ರಕ್ಷಕ ಶರಣಪ್ಪ, ಅರಣ್ಯ ಕಾವಲುಗಾರರಾದ ರವಿ ಮತ್ತು ರವಿನಾಯ್ಕ್‌ ಕಾರ್ಯಾಚರಣೆ ನಡೆಸಿದ್ದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)