ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಮುನಿರತ್ನ ವಜಾಕ್ಕೆ ಆಗ್ರಹ: ರಾಜ್ಯಪಾಲರಿಗೆ ಮನವಿ

Published : 17 ಸೆಪ್ಟೆಂಬರ್ 2024, 15:17 IST
Last Updated : 17 ಸೆಪ್ಟೆಂಬರ್ 2024, 15:17 IST
ಫಾಲೋ ಮಾಡಿ
Comments

ಕನಕಪುರ: ಜಾತಿ ನಿಂದನೆ ಹಾಗೂ ಹೆಣ್ಣುಮಕ್ಕಳ ಬಗ್ಗೆ ಆಕ್ಷೇಪಾರ್ಹ ಪದಬಳಕೆ ಮಾಡಿದ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಮಂಗಳವಾರ ತಹಶೀಲ್ದಾರ್ ಶಿವಕುಮಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಮುನಿರತ್ನ ವಿರುದ್ಧ ದೂರು ನೀಡಿರುವ ಗುತ್ತಿಗೆದಾರ ಚೆಲುವರಾಜು ಹಾಗೂ ಅವರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಹನುಮಂತ ರಾಯಪ್ಪ ನಡುವೆ ನಡೆದಿರುವ ಮಾತಿನ ಸಂಭಾಷಣೆಯಲ್ಲಿ ಅಧಿಕಾರ ದುರ್ಬಳಕೆ ಮತ್ತು ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನವಿದ್ದು ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು‌.

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ದಲಿತ ಸಂಘಟನೆಗಳ ಮುಖಂಡರಾದ ಜೆ.ಎಂ.ಶಿವಲಿಂಗಯ್ಯ, ಹೊಸದುರ್ಗ ಪ್ರಶಾಂತ್, ಮಳೆಗಾಳು ದಿನೇಶ್, ನಟರಾಜು, ಸ್ವಾಮಿ ಹರಿಹರ, ಶಿವಮ್ಮ, ಸೋಮಶೇಖರ್, ಶೇಷಣ್ಣ, ರಮೇಶ, ಕಹಳೆ ರುದ್ರೇಶ್, ಶಿವಶಂಕರ್, ನವೀನ್ ಕುರುಬರಹಳ್ಳಿ, ಕಿರಣ್, ವೆಂಕಟೇಶ್, ಶಿವಲಿಂಗ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT