ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು: ನಾಮಫಲಕ ಅಳವಡಿಕೆಗೆ ಆಗ್ರಹ

Published 4 ಜೂನ್ 2023, 14:39 IST
Last Updated 4 ಜೂನ್ 2023, 14:39 IST
ಅಕ್ಷರ ಗಾತ್ರ

ಕುದೂರು: ಸಾಲುಮರದ ತಿಮ್ಮಕ್ಕ ಅವರು ನೆಟ್ಟಿರುವ ಮರಗಳ ವೀಕ್ಷಣೆಗೆ ಬರುವ ಪರಿಸರ ಪ್ರೇಮಿಗಳನ್ನು ಸ್ವಾಗತಿಸಲು ಹಾಕಿದ್ದ ನಾಮಫಲಕ ಮುರಿದು ಬಿದ್ದು ಎರಡು ವರ್ಷ ಕಳೆದಿದೆ. ಇಂದಿಗೂ ನಾಮಫಲಕ ಹಾಕುವ ಗೋಜಿಗೆ ಹೋಗದೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

ಈ ಕುರಿತು 2021ಜೂನ್ ತಿಂಗಳಲ್ಲಿ ಈಗಿನ ಶಾಸಕ ಎಚ್.ಸಿ ಬಾಲಕೃಷ್ಣ ಅವರು ಆಗಿನ ತಹಶೀಲ್ದಾರ್ ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಮನವಿ ಮಾಡಿ ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದರು. ಹಲವು ಬಾರಿ ಸಾರ್ವಜನಿಕರು ಕೂಡ ಇದನ್ನು ಸರಿಪಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ, ಕೂಡ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಿಮ್ಮಕ್ಕ ಹಾಗೂ ಅವರ ಪತಿ ಬೆಳೆಸಿದ ಮರಗಳನ್ನು ಉಳಿಸಿಕೊಳ್ಳುವ ಹಾಗೂ ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಕುದೂರು ಪಟ್ಟಣದಲ್ಲಿ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ ನಿರ್ಮಿಸಬೇಕೆಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.

ಕುದೂರು ಪಟ್ಟಣಕ್ಕೆ ಬಂದಾಗ ಸ್ಥಳ ಪರಿಶೀಲಿಸಿ ಅದನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಶಾಸಕ ಎಚ್‌.ಸಿ ಬಾಲಕೃಷ್ಣ.

ಮುಂದಿನ ದಿನಗಳಲ್ಲಿ ನಾಮಫಲಕ ಅಚ್ಚುಕಟ್ಟಾಗಿ ಮಾಡಿಸುವ ಕೆಲಸ ಮಾಡಲಾಗುವುದು ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಮಂಜುನಾಥ್.

ಮಾಗಡಿ ಶಾಸಕರಾದ ಹೆಚ್.ಸಿ. ಬಾಲಕೃಷ್ಣ ಅಂದಿನ ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ರವರಿಗೆ ಮನವಿ ಪತ್ರ ಸಲ್ಲಿಸಿದ ಸಂದರ್ಭ
ಮಾಗಡಿ ಶಾಸಕರಾದ ಹೆಚ್.ಸಿ. ಬಾಲಕೃಷ್ಣ ಅಂದಿನ ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ರವರಿಗೆ ಮನವಿ ಪತ್ರ ಸಲ್ಲಿಸಿದ ಸಂದರ್ಭ
ಕುದೂರು - ತುಮಕೂರು ರಸ್ತೆಯಲ್ಲಿ ನಾಮಫಲಕ ಬೀಳುವ ಮುನ್ನ ಇದ್ದ ಜಾಗ
ಕುದೂರು - ತುಮಕೂರು ರಸ್ತೆಯಲ್ಲಿ ನಾಮಫಲಕ ಬೀಳುವ ಮುನ್ನ ಇದ್ದ ಜಾಗ
ಕುದೂರು - ತುಮಕೂರು ರಸ್ತೆಯ ಬದಿಯಲ್ಲಿ ಮುರಿದು ಬಿದ್ದಿದ್ದ ನಾಮಫಲಕ
ಕುದೂರು - ತುಮಕೂರು ರಸ್ತೆಯ ಬದಿಯಲ್ಲಿ ಮುರಿದು ಬಿದ್ದಿದ್ದ ನಾಮಫಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT