ಹಾರೋಹಳ್ಳಿ: ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, 10 ರಿಂದ 15 ವರ್ಷ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಎಂದು ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ತಾಲ್ಲೂಕು ಆಡಳಿತದ ಮೂಲಕ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ ರೈತ ಮುಖಂಡರು, ಗ್ರಾಮ ಲೆಕ್ಕಾಧಿಕಾರಿಗಳನ್ನು ತಾಲ್ಲೂಕಿನಿಂದ ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.

ಗಬ್ಬಾಡಿ ಸಮೀಪದ 40 ವರ್ಷದ ಬಳಿಕ ಜಾಗವೊಂದನ್ನು ನಕಲಿ ದಾಖಲೆ ಬಳಸಿ ಪೋಡಿ ಮಾಡಿಕೊಟ್ಟಿದ್ದಾರೆ. ಇದರ ತನಿಖೆ ಆಗಬೇಕು. ಸರ್ಕಾರಿ ಜಮೀನನ್ನು ಪರಭಾರೆ ವಿರುದ್ಧ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಕೂಡಲೇ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ವರ್ಗಾವಣೆ ಮಾಡದಿದ್ದರೆ ಬಾರುಕೋಲು ಚಳವಳಿ ನಡೆಸಲಾಗುವುದು ಎಂದು ರೈತ ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.

ರಾಜ್ಯ ರೈತ ಸಂಘದ ಚೀಲೂರು ಮುನಿರಾಜು, ಪ್ರಶಾಂತ್ ಹೊಸದುರ್ಗ, ನದೀಮ್ ಪಾಷಾ, ಜಯ ಕರ್ನಾಟಕ ಗಿರೀಶ್, ಬಸವರಾಜು, ಶಿವರಾಜು,ಕಿರಣ್ ಕುಮಾರ್, ಶಿವಕುಮಾರ್, ಮರಿಯಪ್ಪ, ರಂಗಪ್ಪ, ಉತ್ತರಿ ವೆಂಕಟೇಶ್, ಕಾಣಿಕ್ರಾಜ್, ಶ್ರೀನಿವಾಸ್, ಮುನಿಯಪ್ಪ ಸೇರಿದಂತೆ ರೈತ ಸಂಘದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.