ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸೋಂಕಿನ ಭೀತಿಯಿಂದ 18 ಸಾವಿರ ಕೋಳಿಗಳ ನಾಶ

Last Updated 18 ಮಾರ್ಚ್ 2020, 9:22 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ವೈರಸ್ ಭೀತಿ ಮತ್ತು ಹಕ್ಕಿಜ್ವರದಿಂದಾಗಿ ಕುಕ್ಕುಟೋದ್ಯಮ ತತ್ತರಿಸಿದ್ದು, ಬುಧವಾರ ಚನ್ನಪಟ್ಟಣದ ವಿವಿಧ ಕೋಳಿಫಾರ್ಮ್‌ಗಳಲ್ಲಿನ 18 ಸಾವಿರದಷ್ಟು ಕೋಳಿಗಳನ್ನು ಮಾಲೀಕರು ಮಣ್ಣಿನಲ್ಲಿ ಹೂತರು.

ಪ್ರತಿ ಕೆ.ಜಿ.ಗೆ 2-3 ರೂಪಾಯಿಗೆ ಕೇಳುತ್ತಿದ್ದಾರೆ. ಅವುಗಳಿಗೆ ಆಹಾರ ಒದಗಿಸಲೂ ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಮೊದಲ ಬ್ಯಾಚ್ ನ ಕೋಳಿಗಳನ್ನು ಮಣ್ಣಿನೊಳಗೆ ಸಮಾಧಿ ಮಾಡುತ್ತಿದ್ದೇವೆ. ಒಟ್ಟು ನಾಲ್ಕು ಬ್ಯಾಚ್ ನ 75 ಸಾವಿರ ಕೋಳಿಗಳಿದ್ದು, ಇವುಗಳನ್ನು ಹಂತಹಂತವಾಗಿ ಹೂಳುತ್ತೇವೆ. ಇದರಿಂದ 80 ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಕೋಳಿ ಫಾರ್ಮ್ ಮಾಲೀಕ ಫಯಾಜ್ ಅಹಮ್ಮದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT