ಇಲಾಖೆಯ ಸಿಬ್ಬಂದಿಗೆ ಡಿಎಚ್ಒ ಅವಾಜ್‌: ವೈರಲ್‌ ಆಯ್ತು ಹಳೆಯ ವೀಡಿಯೊ

ಸೋಮವಾರ, ಮೇ 27, 2019
23 °C

ಇಲಾಖೆಯ ಸಿಬ್ಬಂದಿಗೆ ಡಿಎಚ್ಒ ಅವಾಜ್‌: ವೈರಲ್‌ ಆಯ್ತು ಹಳೆಯ ವೀಡಿಯೊ

Published:
Updated:

ರಾಮನಗರ: ಪ್ರಕರಣವೊಂದಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಿ. ಅಮರ್‌ನಾಥ್‌ ಅವರು ಇಲಾಖೆಯ ಸಿಬ್ಬಂದಿಗೆ ಅವಾಜ್‌ ಹಾಕಿರುವ ಹಳೆಯ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆರೇಳು ತಿಂಗಳ ಹಿಂದೆ ನಡೆದ ಘಟನೆಯ ವೀಡಿಯೊ ಇದಾಗಿದೆ. ಅಂದು ನಡೆದ ವೈದ್ಯರ ಸಭೆಯ ಸಂದರ್ಭ ನಂಜಾಪುರ ಆಸ್ಪತ್ರೆಯ ಪ್ರಯೋಗಾಲಯ ತಜ್ಞ ಪುಟ್ಟಸ್ವಾಮಿ ಗೌಡ ಎಂಬುವರ ಜೊತೆ ವಾಗ್ವಾದ ನಡೆಸುವ ಡಿಎಚ್‌ಒ ‘ಹತ್ತು ದಿನ ಜೈಲಲ್ಲಿ ಇದ್ದು ಬಂದವನು ನಾನು. ನನ್ನ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಂಡು ಮಾತನಾಡಿ. ಯಾರೂ ನನ್ನನ್ನು ಕೆಣಕಬೇಡಿ. ಈ ಡಿಸ್ಮಿಸ್, ಸಸ್ಪೆಂಡ್‌ ಇವೆಲ್ಲ ನನಗೆ ಪುಟಗೋಸಿ ಇದ್ದಹಾಗೆ. ಬೇಕಿದ್ದರೆ ಇವತ್ತೇ ರಾಜೀನಾಮೆ ನೀಡುತ್ತೇನೆ’ ಎಂದು ಬೆದರಿಕೆ ಹಾಕುತ್ತಾರೆ. ಈ ಸಂದರ್ಭ ಅನೇಕ ವೈದ್ಯರೂ ಪಕ್ಕದಲ್ಲಿ ಇರುತ್ತಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಅಮರ್‌ನಾಥ್‌ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !