ರಾಮನಗರ: ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಾಯಕನಾಗಿ ಆಯ್ಕೆಯಾಗಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಿದ್ದತೆ ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ‘ಸಿ.ಎಂ’ ಕನಸಿಗೆ ಬೆಂಗಳೂರು ದಕ್ಷಿಣ ಜಿಲ್ಲೆ ಬಲ ತುಂಬಿದೆ. ಸ್ವಂತ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದರ ಹಿಂದೆ ಅವರನ್ನು ಸಿ.ಎಂ ಆಗಿ ಕಾಣಬೇಕೆಂಬ ಮತದಾರರ ಹಂಬಲವೂ ಇದೆ.

2023ರಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶಿವಕುಮಾರ್ ಅವರು ‘ಪೆನ್ನು–ಪೇಪರ್ ಕೊಟ್ಟು ನನಗೊಂದು ಅವಕಾಶ ಕೊಡಿ’ ಎಂದು ಮತದಾರರಲ್ಲಿ ‘ಮುಖ್ಯಮಂತ್ರಿ’ ಹುದ್ದೆಯ ಮನದಾಳ ಹಂಚಿಕೊಂಡಿದ್ದರು. ಒಕ್ಕಲಿಗರ ಪ್ರಾಬಲ್ಯದ ಮೈಸೂರು ಭಾಗದ ಜಿಲ್ಲೆಗಳಲ್ಲಿ ಒಂದಾಗಿರುವ ಬೆಂಗಳೂರು ದಕ್ಷಿಣದಲ್ಲಿ (ರಾಮನಗರ) ಅದಕ್ಕೆ ಮತದಾರರು ಸ್ಪಂದಿಸಿದ್ದರು.

ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲೇ ‘ಕೈ’ಗೆ ಶಕ್ತಿ ತುಂಬಿದ್ದ ಮತದಾರರು, ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಚ್.ಎ. ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕನಕಪುರದಲ್ಲಿ ಶಿವಕುಮಾರ್ ರಾಜ್ಯದಲ್ಲಿ ಅತ್ಯಂತ ಹೆಚ್ಚು ಲೀಡ್ನಲ್ಲಿ ಗೆದಿದ್ದರು.

ಮಾಗಡಿಯಲ್ಲಿ ಎ. ಮಂಜುನಾಥ್ ವಿರುದ್ಧ ಸೋತಿದ್ದ ಎಚ್.ಸಿ. ಬಾಲಕೃಷ್ಣ ಅವರಿಗೆ ಮತದಾರರು ಮತ್ತೆ ಮಣೆ ಹಾಕಿ ಗೆಲುವಿನ ಮಾಲೆ ಹಾಕಿದ್ದರು. ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ, ನಂತರದ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ಸ್ಪರ್ಧಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣಕ್ಕೆ ಉಪ ಚುನಾವಣೆ ಘೋಷಣೆಯಾಯಿತು.

ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಘೋಷಣೆಯಾಯಿತು. ಇದರಿಂದಾಗಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿಯ ಸಿ.ಪಿ. ಯೋಗೇಶ್ವರ್ ರಾತ್ರೋರಾತ್ರಿ ಕಮಲ ತೊರೆದು ‘ಕೈ’ ಪಾಳಯ ಸೇರಿ ಅಭ್ಯರ್ಥಿಯಾಗಿದ್ದರು.

ಸಹೋದರರು ಮತ್ತು ಯೋಗೇಶ್ವರ್ ಅವರ ಜಂಟಿ ಕಾರ್ಯಾಚರಣೆಯಿಂದಾಗಿ ಉಪ ಚುನಾವಣೆಯಲ್ಲಿ ಕ್ಷೇತ್ರವು ‘ಕೈ’ ಪಾಲಾಯಿತು. ಯೋಗೇಶ್ವರ್ ಗೆಲ್ಲಿಸುವ ಮೂಲಕ ಸಹೋದರರು ಲೋಕಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿದ್ದರು. ಉಪ ಚುನಾವಣೆ ಗೆಲುವಿನೊಂದಿಗೆ ಜೆಡಿಎಸ್ ಶೂನ್ಯಕ್ಕಿಳಿದು, ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾದವು.

ಇವೆಲ್ಲದರ ಹಿಂದೆ ಇದ್ದದ್ದು ಸಹ ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆ ಕನಸಿಗೆ ನೀರೆರೆಯಬೇಕೆಂಬ ಮತದಾರರ ಒಲವು. ಕಡೆಗೂ ಅದು ಈಡೇರಲು ಕ್ಷಣಗಣನೆ ಶುರುವಾಗಿದೆ. ಜೂನ್ 3ರಂದು ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಬಯಸಿದಂತೆ ಕೈಗೆ ‘ಪೆನ್ನು–ಪೇಪರ್’ ಸಿಗಲಿದೆ.

‘ಹೊಸ ಅಧ್ಯಾಯ ಆರಂಭ’ ಎಂದಿದ್ದರು!

ಉಪ ಚುನಾವಣೆಗೆ ಮುಂಚೆ ‘ಚನ್ನಪಟ್ಟಣದಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ’ ಎಂದು ಡಿ.ಕೆ. ಶಿವಕುಮಾರ್ ಅವರು ಕೆಂಗಲ್ ಆಂಜನೇಯ ದೇವಸ್ಥಾನದಲ್ಲಿ ಹೇಳುವ ಮೂಲಕ. ಆರು ತಿಂಗಳು ಮುಂಚೆಯೇ ಪ್ರಚಾರಕ್ಕೆ ಚಾಲನೆ ನೀಡಿದರು. ಅಷ್ಟೊತ್ತಿಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಗೌಡರ ಕುಟುಂಬದ ಅಳಿಯ ಡಾ. ಸಿ.ಎನ್. ಮಂಜುನಾಥ್ ವಿರುದ್ಧ ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಸೋತ್ತಿದ್ದರು. ಕ್ಷೇತ್ರಕ್ಕೆ ಅವರ ಹೆಸರೇ ಬಲವಾಗಿ ಕೇಳಿ ಬಂದಿತ್ತು. ಆದರೆ, ಡಿ.ಕೆ ಸಹೋದರರು ಎಲ್ಲೂ ಅಭ್ಯರ್ಥಿ ಗುಟ್ಟು ಬಿಡದೆ ಗೆಲುವಿಗೆ ಕ್ಷೇತ್ರವನ್ನು ಹದಗೊಳಿಸಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ತೊರೆದು ಬಂದ ಎದುರಾಳಿ ಸಿ.ಪಿ. ಯೋಗೇಶ್ವರ್ಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.