ರಾಮನಗರ: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿರುವ ಅವರ ಕಟ್ಟಾ ಅಭಿಮಾನಿಯೊಬ್ಬರು ಕಳೆದ ಮೂರು ವರ್ಷಗಳಿಂದ ತಮ್ಮ ಗಡ್ಡ ಮತ್ತು ಕೂದಲು ತೆಗೆಸದೆ ಹಾಗೆಯೇ ಬಿಟ್ಟಿದ್ದಾರೆ. ಹಾರೋಹಳ್ಳಿ ತಾಲ್ಲೂಕಿನ ಚಿಕ್ಕಸಾದೇನಹಳ್ಳಿಯ ಈಶ್ವರಪ್ಪ ತಮ್ಮ ನಾಯಕನಿಗಾಗಿ ಹರಕೆ ಹೊತ್ತವರು.

ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಿಕೆಶಿ ಅವರು 2023ರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಗಲಿದ್ದಾರೆಂಬ ಭಾರೀ ನಿರೀಕ್ಷೆ ಇತ್ತು. ಈಶ್ವರಪ್ಪ ಸಹ ತಮ್ಮ ನಾಯಕನನ್ನು ಸಿ.ಎಂ ಆಗಿ ನೋಡುವ ಕನಸು ಕಂಡಿದ್ದರು.

ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿತ್ತು. ಇದರಿಂದ ಬೇಸತ್ತ ಈಶ್ವರಪ್ಪ ಅವರು, ‘ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವವರೆಗೆ ನಾನು ತಲೆ ಕೂದಲು ಮತ್ತು ಗಡ್ಡ ತೆಗೆಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದರು.

‘ನಮ್ಮ ಸಾಹೇಬರನ್ನು (ಡಿಕೆಶಿ) ಮುಖ್ಯಮಂತ್ರಿಯಾಗಿ ನೋಡುವವರೆಗ ಕೂದಲು–ಗಡ್ಡ ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಬಳಿಕ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ತೆರಳಿದೆ. ಅಲ್ಲಿನ ತುಂಗಭದ್ರಾ ನದಿಯಲ್ಲಿ ಸಾಹೇಬರ ಭಾವಚಿತ್ರ ಹಿಡಿದುಕೊಂಡು ರಾಯರ ಬಳಿ ಹರಕೆ ಹೊತ್ತೆ’ ಎಂದು ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ತೆರಳಿದೆ. ಅಲ್ಲಿನ ತ್ರಿವೇಣಿ ಸಂಗಮದ ಜಾಗದಲ್ಲಿ ಸಾಹೇಬರ ಭಾವಚಿತ್ರವನ್ನು ಕೈಯಲ್ಲಿಡಿದು, ಮುಖ್ಯಮಂತ್ರಿಯಾಗುವ ಭಾಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನಂತರ ಆದಿಚುಂಚನಗಿರಿಯ ಕಾಲಭೈರವೇಶ್ವರನಲ್ಲೂ ಪ್ರಾರ್ಥಿಸಿದೆ’ ಎಂದು ಹೇಳಿದರು.

‘ನನ್ನೆಲ್ಲಾ ಪ್ರಾರ್ಥನೆಗಳು ಮೂರು ವರ್ಷದ ಬಳಿಕ ಫಲಿಸಿವೆ. ಹಲವು ಸವಾಲುಗಳನ್ನು ಮೆಟ್ಟಿ ನಮ್ಮ ಸಾಹೇಬರು ಕೊನೆಗೂ ಮುಖ್ಯಮಂತ್ರಿ ಹುದ್ದೆ ಏರಲಿದ್ದಾರೆ. ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ನನಗೆ ಇದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ. ನನ್ನ ಜೀವಮಾನದ ಅತಿ ಖುಷಿಯ ಕ್ಷಣ’ ಎಂದು ಸಂತಸ ವ್ಯಕ್ತಪಡಿಸಿದರು.

‘ಸಾಹೇಬ್ರು ಭೇಟಿ ಬಳಿಕ ಹರಕೆ ತೀರಿಸುವೆ’

‘ನಮ್ಮ ಸಾಹೇಬರಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿಗೆ ಹೋಗಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುವೆ. ಬಳಿಕ, ಅಲ್ಲಿಂದ ನೇರವಾಗಿ ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರ ಸ್ವಾಮಿಜಿಗೆ ಮುಡಿ ಕೊಟ್ಟು ಹರಕೆ ತೀರಿಸುವೆ. ನಂತರ ಪ್ರಯಾಗ್ರಾಜ್ ಮತ್ತು ಆದಿಚುಂಚನಗಿರಿಗೂ ತೆರಳಿ ಪೂಜೆ ನೆರವೆರಿಸುವೆ’ ಎಂದು ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡವನ ಪತ್ನಿಯನ್ನು ಸದಸ್ಯೆ ಮಾಡಿದ್ರು’

‘ನಾನು ಮೂವತ್ತು ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದು, ಸಾಹೇಬರ ಅಪ್ಪಟ ಅಭಿಮಾನಿಯಾಗಿದ್ದೇನೆ. ಅದನ್ನು ಗುರುತಿಸಿದ ಸಾಹೇಬರು ಈ ಬಡವನ ಪತ್ನಿಗೆ ಒಮ್ಮೆ ರಾಮನಗರ ತಾಲ್ಲೂಕು ಪಂಚಾಯಿತಿ ಟಿಕೆಟ್ ಹಾಗೂ ಮತ್ತೊಮ್ಮೆ ಅಂದಿನ ರಾಮನಗರ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಟ್ಟರು. ಅವರು ಹೆಸರಿನಿಂದಲೇ ಪತ್ನಿ ಗೆಲುವು ಸಾಧಿಸಿದ್ದಳು. ನಮ್ಮ ಸಾಹೇಬರು ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಕಟ್ಟು ಬೀಳುತ್ತಾರೆ. ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಅಂತಹವರಿಗೆ ನಾವೂ ಜೀವ ಕೊಡುವುದಕ್ಕೂ ಸಿದ್ದ’ ಎಂದು ಈಶ್ವರಪ್ಪ ಭಾವುಕರಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.