ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಿಂದ ಹೊರಗುಳಿಯದಿರಿ

Last Updated 19 ಮಾರ್ಚ್ 2019, 13:23 IST
ಅಕ್ಷರ ಗಾತ್ರ

ಮಾಗಡಿ: ‘ಮತದಾನ ಮಾಡುವುದು ಸಂವಿಧಾನ ನಮಗೆ ನೀಡಿರುವ ಪರಮ ಪವಿತ್ರವಾದ ಹಕ್ಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್.ತಿಳಿಸಿದರು.

ಭಾರತ ಚುನಾವಣಾ ಆಯೋಗದ ಸ್ವೀಪ್ ಸಮಿತಿ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಸಹಿಸಂಗ್ರಹ ಆಂದೋಲನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ರ ಭಾರತ. ಮತದಾನ ಪ್ರಕ್ರಿಯೆಯಿಂದ ಹೊರಗೆ ಉಳಿಯಬಾರದು. ಸಚ್ಚಾರಿತ್ರ್ಯ ಉಳ್ಳವರನ್ನು ಲೋಕಸಭೆಗೆ ಆಯ್ಕೆ ಮಾಡಿ ಮೂಲ ಹಕ್ಕುಗಳ ರಕ್ಷಣೆ ಮತ್ತು ಪ್ರಜಾಪ್ರಭುತ್ವವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಪ್ರಜಾರಾಜ್ಯ ಕಣ್ಮರೆಯಾದರೆ, ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಮತದಾರರು ಜಾಗೃತರಾಗಿ ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಲು ಮರೆಯಬೇಡಿ’ ಎಂದರು.

ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜಗದೀಶ್ ನಡುವಿನಮಠ ಮಾತನಾಡಿ ‘ಮತದಾನ ಮಾಡಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

ಪ್ರಭಾರ ಪ್ರಾಂಶುಪಾಲ ಪ್ರೊ.ಟಿ.ಎಸ್.ತಿಮ್ಮಹನುಮಯ್ಯ ಮಾತನಾಡಿ ‘ಸಂವಿಧಾನ ಶ್ರೇಷ್ಠವಾದುದು. ಬಿ.ಆರ್.ಅಂಬೇಡ್ಕರ್ ಮತ್ತು ಇತರರು ಇದಕ್ಕಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬ ಮತದಾರರು ಚುನಾವಣೆಯ ದಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು’ ಎಂದರು.

ವಾಣಿಜ್ಯ ವಿಭಾಗದ ಪ್ರೊ.ಮಂಚಯ್ಯ, ಗೋಪಾಲ, ಚಂದ್ರಕಲಾ, ಚಂದ್ರಪ್ರಭ, ಆರತಿ ರಾಜಣ್ಣ, ಪುರುಷೋತ್ತಮ್, ರಾಜ್ಯಶಾಸ್ತ್ರ ವಿಭಾಗದ ಕೆಂಪರಾಜು, ಅರ್ಥಶಾಸ್ತ್ರ ವಿಭಾಗದ ವೀಣಾ, ಭವಾನಿ, ಸೀಮಾ ಕೌಸರ್, ಕನ್ನಡ ವಿಭಾಗದ ಪಿ.ನಂಜುಂಡ, ಚಲುವರಾಜು, ಶ್ರೀಧರ್, ಆಂಗ್ಲಭಾಷಾ ಬೋಧಕ ಮಂಜುನಾಥ್, ವಿಜ್ಞಾನ ವಿಭಾಗದ ಚಂದ್ರಮೋಹನ್, ಅನಿಲ್‌ ಕುಮಾರ್, ವೀಣಾ, ಇತಿಹಾಸ ವಿಭಾಗದ ಸುಷ್ಮಾ, ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಬಾಬು, ಸಮಾಜಶಾಸ್ತ್ರ ವಿಭಾಗದ ಡಾ.ಚಿದಾನಂದ ಸ್ವಾಮಿ ಮತದಾನದ ಮಹತ್ವ ಕುರಿತು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ನರೇಗಾದ ಅಧಿಕಾರಿ ನವೀನ್, ಬಿಆರ್‌ಸಿ ರಂಗರಾಜು ಇದ್ದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT