ಮಾಗಡಿ: ದನಗಳ ಜಾತ್ರೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಗುರುವಾರ , ಏಪ್ರಿಲ್ 25, 2019
21 °C

ಮಾಗಡಿ: ದನಗಳ ಜಾತ್ರೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ

Published:
Updated:
Prajavani

ಮಾಗಡಿ: ಪಟ್ಟಣದ ತಿರುವೆಂಗಳನಾಥ ರಂಗನಾಥ ಸ್ವಾಮಿ ದನಗಳ ಜಾತ್ರೆ ಆರಂಭವಾಯಿತು. ಮುಜರಾಯಿ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ದನಗಳ ಜಾತ್ರೆಗೆ ಬಂದ ರೈತರು ಮತ್ತು ರಾಸುಗಳಿಗೆ ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆ ಮಾಡಿಲ್ಲ ಎಂದರು ರೈತರು ಆರೋಪಿಸಿದರು.

ದನಗಳ ಜಾತ್ರೆಯಲ್ಲಿ ಸೇರಿರುವ ರೈತರು ಪ್ರಜಾವಾಣಿಯೊಂದಿಗೆ ಮಾತನಾಡಿದರು. ತಂಡೋಪತಂಡವಾಗಿ ರಾಸುಗಳೊಂದಿಗೆ ಬಂದಿರುವ ರೈತರಿಗೆ ಪಶುವೈದ್ಯ ಶಾಲೆ, ಕುಡಿಯುವ ನೀರು, ನೆರಳು, ಬೆಳಕಿನ ವ್ಯವಸ್ಥೆ ಮಾಡಿಲ್ಲ. ಯುಗಾದಿ ಹಬ್ಬದಂದೇ ರೈತರು ರಾಸುಗಳೊಂದಿಗೆ ಮಾಗಡಿ ಜಾತ್ರೆಗೆ ಬರುವುದು ವಾಡಿಕೆಯಾಗಿದೆ. ಚುನಾವಣೆಯ ನೆಪದಲ್ಲಿ ಮುಳುಗಿರುವ ಅಧಿಕಾರಿಗಳು ರೈತರತ್ತ ಗಮನಹರಿಸಿಲ್ಲ ಎಂದು ರೈತ ವೆಂಕಟೇಶ್‌ ತಿಳಿಸಿದರು.

ತಟವಾಳ್‌ ದಾಖಲೆ ಕಾಡುಗೊಲ್ಲರ ಹಟ್ಟಿಯ ಪಶುಪಾಲಕರು ರಾಸುಗಳನ್ನು ಅಲಂಕರಿಸಿಕೊಂಡು ಬಂದು ಕಲ್ಯಾಬಾಗಿಲಿನ ವಿನಾಯಕಸ್ವಾಮಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿ ಜಾತ್ರೆಯಲ್ಲಿ ಕಟ್ಟಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !