ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತಪಾಸಣಾ ಬಸ್‌ಗೆ ಚಾಲನೆ

Last Updated 31 ಮೇ 2020, 15:25 IST
ಅಕ್ಷರ ಗಾತ್ರ

ಮಾಗಡಿ:ಜನರು ಇರುವ ಸ್ಥಳಕ್ಕೆ ತೆರಳಿ ಅವರನ್ನು ಕೋವಿಡ್‌-19 ಪರೀಕ್ಷೆಗೆ ಒಳಪಡಿಸುವ ಕಾರ್ಯ ತಾಲ್ಲೂಕಿನಲ್ಲಿ ಆರಂಭವಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಬಸ್ ಮೂಲಕ ಈ ಪರೀಕ್ಷೆ ನಡೆಯಲಿದೆ.

ಕಲ್ಯಾಬಾಗಿಲು ಬಳಿಕೋವಿಡ್‌-19 ವಿಶೇಷ ಸಂಚಾರಿ ತಪಾಸಣಾ ಬಸ್‌ಗೆಶಾಸಕ ಎ.ಮಂಜುನಾಥ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೊರೊನಾ ಸೋಂಕು ಹರಡದಂತೆ ತಡೆಯಲು, ಹೆಚ್ಚಿನ ಜನರನ್ನು ಬೇಗನೆ ಪರೀಕ್ಷೆಗೊಳಪಡಿಸಲು ಮೊಬೈಲ್‌ ತಪಾಸಣಾ ಬಸ್‌ ನೀಡಲಾಗಿದೆ. ಜ್ವರ, ಕೆಮ್ಮು ಸೇರಿದಂತೆ ಸೋಂಕು ಲಕ್ಷಣ ಹೊಂದಿದ್ದವರು ಇಲ್ಲಿ ಪರೀಕ್ಷೆಗೊಳಗಾಬೇಕು ಎಂದು ಹೇಳಿದರು.

ಮೊಬೈ‌ಲ್‌ ಕ್ಲಿನಿಕ್ ತಾಲ್ಲೂಕಿನಾದ್ಯಂತ ಸಂಚರಿಸಲಿದ್ದು, ಕೋವಿಡ್-19 ತುರ್ತು ಸೇವೆಗೆ ಸಹ ಲಭ್ಯವಿದೆ. ತಪಾಸಣಾ ಬಸ್‌ ಗ್ರಾಮಕ್ಕೆ ಆಗಮಿಸಿದಾಗ ನಿಯಾಮಾವಳಿ ಪಾಲಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಮತ್ತು ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಪುರಸಭೆ ಸದಸ್ಯ ಎಂ.ಎನ್.ಮಂಜುನಾಥ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್,ಇತರರು ಇದ್ದರು

ಏನಿದರ ವಿಶೇಷ:ಕೋವಿಡ್‌-19 ರ್‍ಯಾಪಿಡ್ ಪರೀಕ್ಷೆಗಾಗಿ ಬಸ್ ಬಳಸಿಕೊಳ್ಳಲಾಗುತ್ತಿದೆ. ಸಂಚಾರಿಬಸ್ಜನರು ಇದ್ದಲ್ಲಿಗೇ ತೆರಳಿ ತಪಾಸಣೆ ನಡೆಸಲಿದೆ. ಜನಸಂದಣಿ ಹೆಚ್ಚಿರುವ ರೇಷ್ಮೆ ಮಾರುಕಟ್ಟೆ, ಎಪಿಎಂಸಿ ಮೊದಲಾದ ಕಡೆಗಳಲ್ಲಿ ನಿಲ್ಲಲಿದೆ. ಇಲ್ಲಿರುವವರಲ್ಲಿ ವಯೋವೃದ್ಧರು, ಸೋಂಕಿನ ಲಕ್ಷಣಗಳು ಕಂಡುಬರುವವರಲ್ಲಿ ಪರೀಕ್ಷೆ ನಡೆಸಲಿದೆ.ಈಬಸ್‌ನ ಮುಂಭಾಗದಲ್ಲಿ ವೈದ್ಯರ ಆಸನ, ಬಳಿಕ ರೋಗಿಗಳಿಗೆ ಹಾಸಿಗೆ ವ್ಯವಸ್ಥೆ, ತಪಾಸಣೆ ನಡೆಸಲು ಕ್ಯೂಬಿಕಲ್ ಯೂನಿಟ್, ನೀರಿನ ವ್ಯವಸ್ಥೆಯೊಂದಿಗೆ ವಾಶ್ ಬೇಸಿನ್ ಇರಲಿದೆ. ತಪಾಸಣೆಗೊಳಪಡುವವರು ಹಿಂದಿನ ಬಾಗಿಲಿನಿಂದ ಹತ್ತಬೇಕು.

ಇಲ್ಲಿಬಸ್ಚಾಲಕ, ಒಬ್ಬ ವೈದ್ಯರು, ನರ್ಸ್, ಒಬ್ಬರು ಪ್ರಯೋಗಾಲಯ ತಜ್ಞರು ಇರಲಿದ್ದಾರೆ. ಮೊದಲು ಜ್ವರದ ಪರೀಕ್ಷೆ ನಡೆಯಲಿದ್ದು, ದೇಹದ ಉಷ್ಣಾಂಶ ಹೆಚ್ಚಿದ್ದಲ್ಲಿ ಅಂತಹವರ ಗಂಟಲು ದ್ರವ ಸಂಗ್ರಹಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT