ಶುಕ್ರವಾರ, ಅಕ್ಟೋಬರ್ 18, 2019
27 °C

‘ಬಡತನ ನಿರ್ಮೂಲನೆಗೆ ವಿದ್ಯೆ ರಹದಾರಿ’

Published:
Updated:
Prajavani

ಮಾಗಡಿ: ‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಅಲ್ಪಸಂಖ್ಯಾತ ಮತ್ತು ಇತರೆ ಸಮುದಾಯಗಳ ಪೋಷಕರು ಮುಂದಾಗಬೇಕು’ ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯ ರಾಜ್ಯ ಸಮಿತಿ ಸದಸ್ಯ ಸೈಯದ್‌ ಇಮಾನ್‌ ಹೇಳಿದರು.

ಇಲ್ಲಿನ ಆಲ್‌ಫಲಾ ಕಾಲೇಜಿನ ಆವರಣದಲ್ಲಿ ಬುಧವಾರ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯ ಸಮಿತಿ ವತಿಯಿಂದ ನಡೆದ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತ ಸಮುದಾಯದ ಯುವಕರು ವಿದ್ಯೆ ಮತ್ತು ಕ್ರೀಡಾಭ್ಯಾಸದಲ್ಲಿ ಸದೃಢರಾಗಬೇಕು. ಬಡತನ ನಿರ್ಮೂಲನೆಗೆ ವಿದ್ಯೆ ರಹದಾರಿ ಇದ್ದಂತೆ. ಸಂಘಟಿತರಾಗುವುದರ ಜತೆಗೆ ತೀರಾ ಹಿಂದುಳಿದ ವರ್ಗಗಳಲ್ಲಿ ಅರಿವು ಮೂಡಿಸಿ ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಬೇಕು. ಯುವಜನರು ದುಷ್ಚಚಟಗಳಿಂದ ದೂರ ಉಳಿದು, ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಬೇಕಿದೆ’ ಎಂದರು.

ತಾಲ್ಲೂಕು ಸಮಿತಿ ಸದಸ್ಯ ಅನ್ಸರ್‌ ಪಾಷಾ ಮಾತನಾಡಿ, ‘ಶಿಕ್ಷಣ ಪಡೆಯುವುದು ಬಹಳ ಮುಖ್ಯ. ವಿದ್ಯೆ ಜತೆಗೆ ದೇಹ ಮತ್ತು ಮನಸ್ಸಿನ ಆರೋಗ್ಯವೂ ಮುಖ್ಯ. ಆ ಮೂಲಕ ಸೌಹಾರ್ದತೆಯಿಂದ ಸರ್ವರಲ್ಲಿ ಒಂದಾಗಿ ಬದುಕಬೇಕು’ ಎಂದರು.

ಎಸ್‌ಡಿಪಿಐ ಸದಸ್ಯರಾದ ತಾಜೀಮ್‌, ಮೋಹಿನ್‌, ಮುಜಾಹಿದ್‌, ಸಕ್ರಮ್‌, ಜನೇದ್‌, ಶಫಿ, ಅಯಾಜ್‌, ಸುಹೇಲ್‌ ಸದ್ದಾಮ್‌, ವಸೀಮ್‌ ಮಾತನಾಡಿದರು. ಕ್ಯಾಂಪಸ್‌ ಪ್ರಂಟ್‌ ಆಫ್‌ ಇಂಡಿಯಾ ಸಮಿತಿಯ ದಶಕದ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು. ಪೋಷಕರಲ್ಲಿ ಅರಿವು ಮೂಡಿಸಲು ಹೊಸ ಮಸೀದಿ ಮೊಹಲ್ಲಾದಲ್ಲಿ ಮೆರವಣಿಗೆ ನಡೆಸಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಂತೆ ಮನವಿ ಮಾಡಲಾಯಿತು.

Post Comments (+)