ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ಹಿಂಡು ದಾಳಿ: ಬೆಳೆ ನಾಶ

Last Updated 18 ಡಿಸೆಂಬರ್ 2020, 16:11 IST
ಅಕ್ಷರ ಗಾತ್ರ

ರಾಮನಗರ:ತಾಲ್ಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಆರು ಆನೆಗಳ ಹಿಂಡು ದಾಳಿ ನಡೆಸಿ ರಾಗಿ, ತೆಂಗು, ಬಾಳೆ ಮೊದಲಾದ ಬೆಳೆಗಳನ್ನು ನಾಶಪಡಿಸಿವೆ. ಇದೇ ವೇಳೆ ಬೋರ್‌ವೆಲ್‌ ಪರಿಕರಗಳು, ನೀರಿನ ಪೈಪ್ ಸಹ ಹಾಳಾಗಿವೆ.

ತೆಂಗಿನಕಲ್ಲು ಅರಣ್ಯ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಲಕ್ಕೋಜನಹಳ್ಳಿ ಗ್ರಾಮದ ಶಿವಶಂಕರ್, ಮಂಜು, ಭಗೀರಥ, ಕರಿಯಪ್ಪ ಎಂಬುವರ ಜಮೀನಿನಲ್ಲಿದ್ದ ರಾಗಿ ಮೆದೆಗಳು, ಸುರೇಶ್ ಎಂಬುವರ ಕೊಳವೆಬಾವಿ ಪರಿಕರಗಳು, ಡಿ. ಪುಟ್ಟಸ್ವಾಮಯ್ಯ ಎಂಬುವರ ಬಾಳೆತೋಟ, ಭಗೀರಥ ಎಂಬುವರ ತೆಂಗಿನ ಮರಗಳು ಹಾನಿಗೀಡಾಗಿವೆ.

ಆನೆ ದಾಳಿಯಿಂದ ರೈತರಿಗೆ ಸಾಕಷ್ಟು ನಷ್ಟ ಸಂಭವಿಸಿದೆ.ಪದೇ ಪದೇ ಫಸಲು ಹಾಳಾಗುತ್ತಿದೆ. ಬೆಳಗಿನ ವೇಳೆಯಲ್ಲಿ ಕೃಷಿ ಕೆಲಸ ನಿರ್ವಹಿಸಲು ಭಯವಾಗುತ್ತಿದೆ. ನಷ್ಟವಾದ ಬೆಳೆಗಳಿಗೆ ಸೂಕ್ತವಾದ ವೈಜ್ಞಾನಿಕ ಪರಿಹಾರ ನೀಡಬೇಕು. ಆನೆಗಳನ್ನು ತೆಂಗಿನಕಲ್ಲು ಅರಣ್ಯದ ಕಡೆ ಬರದಂತೆ ಮಾಡಬೇಕು ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.

ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಅರಣ್ಯ ರಕ್ಷಕ ವೆಂಕಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT