ಬಿಡದಿ (ರಾಮನಗರ): ಹೋಬಳಿಯ ಹೆಗ್ಗಡಗೆರೆ ಗ್ರಾಮದ ಮಾವಿನ ತೋಟಕ್ಕೆ ನುಗ್ಗಿರುವ ಒಂಟಿ ಸಲಗವೊಂದು, ಜಮೀನಿನ ಕಾಂಪೌಂಡ್ ಕೆಡವಿದೆ. ಬಾಳೆ, ತೆಂಗು, ಮಾವು ಸೇರಿದಂತೆ ರಾಗಿ ಬೆಳೆಗಳನ್ನು ಮೇಯ್ದು ತೋಟದಲ್ಲಿ ದಾಂದಲೆ ನಡೆಸಿದೆ. ತೋಟದ ಕಾವಲುಗಾರ ತಂಗಲು ನಿರ್ಮಿಸಿದ್ದ ಗುಡಿಸಲನ್ನು ಸಹ ಹಾನಿಗೊಳಿಸಿದೆ.

ತೋಟಕ್ಕೆ ಆನೆ ಬಂದಿದ್ದನ್ನು ಗಮನಿಸಿದ ಕಾವಲುಗಾರ ಮತ್ತು ಆತನ ಪತ್ನಿ ಕೂಡಲೇ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಗುಡಿಸಲ ಬಳಿ ಬಂದ ಆನೆ ಅಕ್ಕಿ, ಬೆಳೆಕಾಳು, ತರಕಾರಿಗಳನ್ನ ತಿಂದು ವಾಪಸ್ ತೆರಳಿದೆ. ನಂತರ ಜಯಲಕ್ಷ್ಮಮ್ಮ ಎಂಬುವರ ಜಮೀನಿನಲ್ಲಿದ್ದ ತೆಂಗಿನ ಮರಗಳ ಸುಳಿ ಹಾಗೂ ಬಾಳೆಯನ್ನು ತಿಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಮಾಜಿ ಶಾಸಕ ಎ. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎಸಿಎಫ್ ಪುಟ್ಟಮ್ಮ ಮತ್ತು ಆರ್ಎಫ್ಒ ಮಹಮ್ಮದ್ ಮನ್ಸೂರ್ ಅವರಿಂದ ಹಾನಿ ಕುರಿತು ಮಾಹಿತಿ ಪಡೆದುಕೊಂಡರು. ಒಂಟಿ ಸಲಗವನ್ನು ಕಾಡಿಗೆ ಓಡಿಸುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾಡಿರುವ ಆತಂಕ ದೂರ ಮಾಡಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ತೊರೆದೊಡ್ಡಿಯ ಖಾಸಗಿ ಜಮೀನಿನಲ್ಲಿ ಕಾಡಾನೆಗಳ ಹಿಂಡು ಬೀಡುಬಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಳೆಗೆ ಕಾಡಿಗಟ್ಟಿದ್ದರು. ಕೆಲ ದಿನಗಳ ಹಿಂದೆ ಬಾನಂದೂರು– ಗೊಲ್ಲಹಳ್ಳಿ ರಸ್ತೆ ಬಳಿ 3 ಕಾಡಾನೆಗಳು ಜನರಿಗೆ ಕಾಣಿಸಿಕೊಂಡಿದ್ದವು. ಜನರು ಜಮೀನುಗಳಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಆನೆಗಳ ಹಾವಳಿಗೆ ಶಾಶ್ವರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕ್ರಮದ ಭರವಸೆ: ಬನ್ನೇರುಘಟ್ಟ ಹಾಗೂ ಕಾವೇರಿ ವನ್ಯಧಾಮಗಳ ನಡುವಿನ ಅರಣ್ಯದಲ್ಲಿ ಆನೆಗಳು ಹೆಚ್ಚಾಗಿದೆ. ನಾವು ಎಷ್ಟೇ ಕಾರ್ಯಾಚರಣೆ ನಡೆಸಿ ಓಡಿಸಿದರೂ ಆನೆಗಳು ಮತ್ತೆ ವಾಪಸ್ ಬರುತ್ತಿವೆ. ಆನೆಗಳ ನಿಯಂತ್ರಣಕ್ಕಾಗಿ ಈಗಾಗಲೇ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಸೋಲಾರ್ ತಂತಿ ನಿರ್ಮಾಣ ಹಾಗೂ ನಾಡಿಗೆ ಬರುವ ಆನೆಗಳನ್ನು ಕಾಡಿಗೆ ಓಡಿಸಲು ಆನೆ ಕಾರ್ಯಪಡೆಯಂತಹ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಈ ಭಾಗಕ್ಕೆ ಮತ್ತೆ ಆನೆಗಳು ಬಾರದಂತೆ ಕ್ರಮ ನೋಡಿಕೊಳ್ಳಲಾಗುವುದು ಎಂದು ಆರ್ಎಫ್ಒ ಮನ್ಸೂರ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.