ಹಾರೋಹಳ್ಳಿ: ನಕಲಿ ದಾಖಲೆ ಸೃಷಿಸಿ ವ್ಯಕ್ತಿಯೊಬ್ಬರು ನಮ್ಮ ಗ್ರಾಮದವರ ಜಮೀನನ್ನು ಕಬಳಿಸಲು ಹೊರಟಿದ್ದಾರೆ. ಇದಕ್ಕೆ ಸರ್ವೆ, ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ದೊಡ್ಡಸಾದೇನಹಳ್ಳಿ ಗ್ರಾಮಸ್ಥರು ಬುಧವಾರ ಜಮೀನಿನ ಸರ್ವೆಯೊಂದಕ್ಕೆ ವಿರೋಧ ವ್ಯಕ್ತಪಡಿಸಿ ಸರ್ವೆಯರ್ಗೆ ಘೇರಾವ್ ಹಾಕಿದರು.

ಹಾರೋಹಳ್ಳಿ ತಾಲ್ಲೂಕಿನ ದೊಡ್ಡಸಾಧೇನಹಳ್ಳಿ ಗ್ರಾಮದಲ್ಲಿ ಜಮೀನಿನ ಸರ್ವೆಯೊಂದಕ್ಕೆ ಪೊಲೀಸರ ರಕ್ಷಣೆಯೊಂದಿಗೆ ಸರ್ವೆಯರ್ ಆಗಮಿಸಿದ್ದರು. ಈ ವೇಳೆ ಜಮೀನಿನ ಸರ್ವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಈ ಹಿಂದೆ ಇದ್ದ ಸರ್ವೆಯರ್ನಿಂದ ಇಡೀ ಗ್ರಾಮವೇ ಹಾಳಾಗಿದೆ. ನಮ್ಮ ಜಮೀನಿನ ಸರ್ವೆ ಮಾಡಿಕೊಡಿ ಎಂದು ಅರ್ಜಿ ಕೊಟ್ಟು ತಿಂಗಳುಗಟ್ಟಲೆ ಕಳೆದರೂ ಸಹ ಯಾವೊಬ್ಬ ಅಧಿಕಾರಿಗಳೂ ಕ್ಯಾರೆ ಎನ್ನುವುದಿಲ್ಲ. ಹಣವಂತರ, ಉದ್ಯಮಿಗಳ ಸರ್ವೆ ಅಥವಾ ಇನ್ನಿತರ ಕೆಲಸಗಳಾದರೆ ಅರ್ಜಿ ನೀಡದಿದ್ದರೂ ಅವರ ಕೆಲಸ ಸರಾಗವಾಗಿ ಆಗುತ್ತಿದೆ ಎಂದು ಸರ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕಷ್ಟ ಕೇಳಿ ಸ್ವಾಮಿ: ಪೊಲೀಸರೊಂದಿಗೆ ಮಾತಿಗಿಳಿದ ಗ್ರಾಮಸ್ಥರು, ‘ನೋಡಿ ಸ್ವಾಮಿ ಅಂಗವಿಕಲನ, ಕೈಲಾಗದವರ ಜಮೀನನ್ನು ಕಬಳಿಸಲು ಬಲಾಢ್ಯರು ಹೊರಟಿದ್ದಾರೆ. ಇದಕ್ಕೆ ಯಾರೂ ಆಸ್ಪದ ನೀಡಬಾರದು. ಜಮೀನು ಕಬಳಿಸುವ ಉದ್ದೇಶದಿಂದಲೇ ಅಮಾಯಕನ ಮೇಲೆ ಕೇಸು ಹಾಕಿ ಅಂಗವಿಕಲ ಎನ್ನದೇ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಈ ಬಗ್ಗೆ ನೀವೇ ಗಮನಹರಿಸಿ’ ಎಂದು ಗ್ರಾಮಸ್ಥರು ಪೊಲೀಸರ ಬಳಿ ಅವಲತ್ತುಕೊಂಡರು.

ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮುಂದೊಂದು ದಿನ ಸರ್ವೆ ನಡೆಸುವಂತೆ ತಿಳಿ ಹೇಳಿದರು. ಸರ್ವೆಯರ್ ವಾಪಸ್ ತೆರಳಿದರು.

ಗ್ರಾಮಸ್ಥ ರಮೇಶ್, ಮಂಜು, ಭದ್ರಗಿರಿಯಯ್ಯ, ಭೋಳೇಗೌಡ, ಮಹಾದೇವಯ್ಯ, ಕುನಪ್ಪ, ಬಾಳೆಗೌಡ ಕೆ, ಸುರೇಶ್, ರಾಜು, ನಾಗ, ಗಿರಿಜಮ್ಮ, ಶುಶಿಲ್ಲಮ್ಮ, ಜಯಮ್ಮ, ಪವಿತ್ರ, ಗೌರಮ್ಮ, ಜಯ ರತ್ನಮ್ಮ, ಪುಟ್ಟಮ್ಮ ಗಿರಿಜಮ್ಮ, ಮನಿ ಚೂಡ, ರಾಜು ಪ್ರಕಾಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.