ಕನಕಪುರ: ಕೌಟುಂಬಿಕ ಕಲಹ ವ್ಯಕ್ತಿ ಆತ್ಮಹತ್ಯೆ

ಕನಕಪುರ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿ ರುವುದು ಘಟನೆ ತಾಲ್ಲೂಕಿನ ಕೊಟ್ಟಗಾಳು ಬಳಿಯ ಬೆಳಗುಳಿ ಕೆರೆಯ ಹಳ್ಳದಲ್ಲಿ ಮಂಗಳವಾರ ನಡೆದಿದೆ.
ಮುರಕಣಿ ಗ್ರಾಮದ ಕಾಳೇಗೌಡರ ಮಗ ಕುಮಾರ್ (53) ಮೃತಪಟ್ಟವರು.
ಪತ್ನಿಯನ್ನು ತವರು ಮನೆಗೆ ಬಿಟ್ಟು ಬರುವುದಾಗಿ ಭಾನುವಾರ ಬೆಳಿಗ್ಗೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಸೋಮವಾರ ಬೆಳಗುಳಿ ಕೆರೆಯ ಸಮೀಪ ಬೈಕ್ ಸಿಕ್ಕಿದ್ದು ಅದನ್ನು ಪೊಲೀಸರು ಯಾರೋ ನಿಲ್ಲಿಸಿ ಹೋಗಿದ್ದಾರೆ ಎಂದು ಠಾಣೆಗೆ ತಂದಿದ್ದಾರೆ. ಮಂಗಳವಾರ ಬೆಳಿಗ್ಗೆ ಕೆರೆಯ ಹಳ್ಳದಲ್ಲಿರುವ ನೀರಿನಲ್ಲಿ ಶವವೊಂದು ತೇಲುತ್ತಿದೆ ಎಂದು ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ.
ಗ್ರಾಮಾಂತರ ಠಾಣೆಗೆ ದೂರು ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.