ಗುರುವಾರ , ಆಗಸ್ಟ್ 22, 2019
27 °C

ನಿವೃತ್ತ ನ್ಯಾಯಾಧೀಶರಿಗೆ ಬೀಳ್ಕೊಡುಗೆ

Published:
Updated:
Prajavani

ಕನಕಪುರ: ನ್ಯಾಯಾಧೀಶರಾದವರು ತಮ್ಮ ವೃತ್ತಿ ಜೀವನದಲ್ಲಿ ಕುಟುಂಬಕ್ಕೆ ಹೆಚ್ಚಿನ ಕಾಲಾವಕಾಶ ಕೊಡಲು ಆಗುವುದಿಲ್ಲವೆಂದು ಹಿರಿಯ ಸಿವಿಲ್‌ ಶ್ರೇಣಿ ನ್ಯಾಯಾಲಯದ ನಿವೃ‌ತ್ತ ನ್ಯಾಯಾಧೀಶ ಡಿ.ವೇಣುಗೋಪಾಲ್‌ ತಿಳಿಸಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಅವರಿಗೆ ವಕೀಲರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಇಲ್ಲಿ 2 ವರ್ಷಕ್ಕೂ ಹೆಚ್ಚಿನ ಕಾಲ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ತೋರಿದ ಅಭಿಮಾನಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ ಅವರು ಮುಂದಿನ ಜೀವನವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯುತ್ತೇನೆ’ ಎಂದರು. 

ವಕೀಲರ ಸಂಘದ ಅಧ್ಯಕ್ಷ ಕೆ.ಎಸ್‌. ಗಿರಿಧರ್‌ ಮಾತನಾಡಿದರು.

ನ್ಯಾಯಾಧೀಶರಾದ ನಿಂಬಣ್ಣ ಕಲ್ಕಣಿ, ಹನುಮಂತ, ಸಂತೋಷ್‌ಕುಮಾರ್‌, ಹಿರಿಯ ವಕೀಲರಾದ ಎಲ್‌.ಪುಟ್ಟಮಾದಯ್ಯ, ರಾಮಚಂದ್ರ, ದೊಡ್ಡವೀರೇಗೌಡ, ಎ.ಆರ್‌.ಖಾನ್‌ ಇದ್ದರು.

Post Comments (+)