ಕನಕಪುರ: ರೈತ ಸಂಘಟನೆ ತನ್ನ ಹೋರಾಟದಲ್ಲಿ ಗೆಲ್ಲಬೇಕಾದರೆ ರಾಜಕೀಯ ಶಕ್ತಿ ಬೇಕಿದೆ. ಮುಂದಿನ ದಿನಗಳಲ್ಲಿ ನಡೆಯುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡಳ್ಳಿ ಅನುಕುಮಾರ್ ತಿಳಿಸಿದರು.

ತಾಲ್ಲೂಕಿನ ಸಾತನೂರಿನಲ್ಲಿರುವ ರೈತ ಸಂಘ ಕಚೇರಿಯಲ್ಲಿ ಶನಿವಾರ ನಡೆದ ರೈತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ರೈತರ ಪರವಾದ ಯೋಜನೆಗಳನ್ನು ರೂಪಿಸುವ ಭರವಸೆ ನೀಡುತ್ತಾರೆ. ಅಧಿಕಾರ ಹಿಡಿದ ಮೇಲೆ ರೈತರ ಮೇಲೆ ಸವಾರಿ ಮಾಡುತ್ತಾ, ಅವರ ವಿರುದ್ಧ ಕಾನೂನು ಜಾರಿಗೊಳಿಸುತ್ತಾರೆ ಎಂದು ದೂರಿದರು.

ಯಾವ ರಾಜಕೀಯ ಪಕ್ಷದವರು ರೈತರ ಪರವಾಗಿ ನಿಲ್ಲುವುದಿಲ್ಲ ಮತ್ತು ಕಾರ್ಯಕ್ರಮ ರೂಪಿಸುವುದಿಲ್ಲ. ನಿಸ್ವಾರ್ಥತೆಯಿಂದ ಬದುಕುತ್ತಿರುವ ರೈತರು ತಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ. ರೈತರ ಹಿತಕ್ಕಾಗಿ ರೈತ ಸಂಘ ಸರ್ಕಾರದ ವಿರುದ್ಧ ರೈತರ ಪರವಾಗಿ ಹೋರಾಟ ನಡೆಸುತ್ತಿದೆ ಎಂದರು.

ಇಂತಹ ಪರಿಸ್ಥಿತಿಯಲ್ಲಿ ರೈತ ಸಂಘ ರಾಜಕೀಯವಾಗಿ ಶಕ್ತಿಯಾಗಿದ್ದರೆ ಮಾತ್ರ ಹೋರಾಟಗಳಲ್ಲಿ ಗೆಲ್ಲಲು ಸಾಧ್ಯ. ಇದಕ್ಕಾಗಿ ರೈತ ಸಂಘದಿಂದಲೇ ಮುಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಂಘದಿಂದ ತೀರ್ಮಾನಿಸಿರುವುದಾಗಿ ತಿಳಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಗೂಳಿಗೌಡ, ಉಪಾಧ್ಯಕ್ಷ ಚಂದ್ರೇಗೌಡ, ಹೋಬಳಿ ಅಧ್ಯಕ್ಷ ಸಿದ್ದರಾಮೆಗೌಡ, ಪ್ರಧಾನ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ರೈತ ಸಂಘದ ಮುಖಂಡರಾದ ಪುಟ್ಟರಂಗಣ್ಣ, ನಿಂಗೇಗೌಡ, ಸತೀಶ್, ರಾಮಣ್ಣ, ಚೆನ್ನಿಂಗಣ್ಣ, ಪುಟ್ಟಸ್ವಾಮಿ, ಸಿದ್ದಣ್ಣ, ಗಣೇಶ್, ತಿಪ್ಪಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.