ಮಾಗಡಿಯಲ್ಲಿ ಹಬ್ಬದ ಸಡಗರ

ಶನಿವಾರ, ಏಪ್ರಿಲ್ 20, 2019
30 °C

ಮಾಗಡಿಯಲ್ಲಿ ಹಬ್ಬದ ಸಡಗರ

Published:
Updated:

ಮಾಗಡಿ: ತಾಲ್ಲೂಕಿನಾದ್ಯಂತ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮುಂಜಾನೆ ಮನೆಯ ಮುಂದೆ ಬಣ್ಣದ ರಂಗೋಲಿ ಬಿಡಿಸಲಾಗಿತ್ತು. ತಳಿರು ತೋರಣ ಕಟ್ಟಿ, ಮನೆದೇವರನ್ನು ಪೂಜಿಸಿ, ಬೇವುಬೆಲ್ಲದ ಸಿಹಿಯನ್ನು ಸವಿದರು. ಹೊಸಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ತಿರುವೆಂಗಳನಾಥ ರಂಗನಾಥ ಸ್ವಾಮಿ, ಸೋಮೇಶ್ವರಸ್ವಾಮಿ, ಸಾವನದುರ್ಗ, ಶ್ರೀಪತಿಹಳ್ಳಿದೇವರಹಟ್ಟಿ, ನೇರಿಳೆಕೆರೆ, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ಶ್ರೀಗಿರಿಪುರದ ವೆಂಕಟರಮಣಸ್ವಾಮಿ, ಆಂಜನೇಯಸ್ವಾಮಿ ಗೊಲ್ಲರ ಹಟ್ಟಿ ಚಿತ್ರಲಿಂಗೇಶ್ವರಸ್ವಾಮಿ ಇತರೆಡೆಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿ, ಬೇವು ಬೆಲ್ಲ ವಿತರಿಸಲಾಯಿತು.

ಮಾರುಕಟ್ಟೆಯಲ್ಲಿ ಹೂವು ಹಣ್ಣು, ತರಕಾರಿ, ಬೇಳೆ, ಬೆಲ್ಲದ ಬೆಲೆಗಳು ಏಕಾಏಕಿ ಏರಿಕೆಯಾಗುತ್ತದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಬೋರೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !