ಗುರುವಾರ , ನವೆಂಬರ್ 14, 2019
18 °C

ಬೆಂಕಿ ಆಕಸ್ಮಿಕ: ಮನೆಗೆ ಹಾನಿ

Published:
Updated:
Prajavani

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ಭಾನುವಾರ ಸಂಜೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಒಳಗೆ ಇದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಗ್ರಾಮದ ಗೌರಮ್ಮ ಪುಟ್ಟಸ್ವಾಮಯ್ಯ ಅವರು ಮನೆಗೆ ಬೀಗ ಹಾಕಿ ರೇಷ್ಮೆ ಸೊಪ್ಪು ತರಲು ಹೊಲಕ್ಕೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮನೆಯ ಛಾವಣಿಯ ಜೊತೆಗೆ 50 ಸಾವಿರ ನಗದು, ಟಿ.ವಿ. ಫ್ರಿಜ್‌, ಕಾಗದ ಪತ್ರಗಳೂ ಬೆಂಕಿಯಿಂದಾಗಿ ಸುಟ್ಟುಹೋಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಅದನ್ನು ನಂದಿಸಲು ಅಕ್ಕಪಕ್ಕದ ಮನೆಯವರು ಮುಂದಾಗಿದ್ದು ಫಲ ನೀಡಲಿಲ್ಲ.

ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)