ಹಾರೋಹಳ್ಳಿ: ಪ್ರತಿಷ್ಠಿತ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ₹1ಒಂದು ಲೀಟರ್ ಹಾಲು ಮಾರಾಟ ಮಾಡಲು ಮುಂದಾಗಿರುವುದು ರೈತ ಸಮುದಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್) ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಹಾರೋಹಳ್ಳಿ ಪಟ್ಟಣದ ಆದಿಶಕ್ತಿ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು.‘ಕ್ಷೀರ ಮಾರುಕಟ್ಟೆಯನ್ನು ಕೈವಶ ಮಾಡಿಕೊಂಡು ಲಾಭ ಗಳಿಸುವ ದುರುದ್ದೇಶದಿಂದ ಫ್ಲಿಪ್ಕಾರ್ಟ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಇದು ದೇಶದ ರೈತ ಸಮುದಾಯವನ್ನೇ ಹಾಳು ಮಾಡುವ ಕೃತ್ಯ’
ಎಂದರು.

ಪ್ರತಿ ಲೀಟರ್ ಹಾಲಿಗೆ ₹38ನಿಂದ 40ವರಗೆ ಪಾವತಿಸುತ್ತಿದ್ದೇವೆ. ಫ್ಲಿಪ್ಕಾರ್ಟ್ ₹1ಒಂದು ಲೀಟರ್ ಹಾಲು ಮಾರಾಟ ಮಾಡಲು ಹೇಗೆ ಸಾಧ್ಯ? ಯಾರಿಂದ ಖರೀದಿಮಾಡುತ್ತಿದ್ದಾರೆ? ಇದೆಲ್ಲ ಪ್ರಶ್ನಿಸಬೇಕಾದ ಅಂಶಗಳಾಗಿವೆ. ಫ್ಲಿಪ್ಕಾರ್ಟ್ ಕಳಪೆ ಗುಣಮಟ್ಟದ ಹಾಲು ಮಾರಾಟ ಮಾಡುವ ಸಾಧ್ಯತೆ ಇದೆ. ಗ್ರಾಹಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಬಮುಲ್ ಪ್ರಧಾನ ವ್ಯವಸ್ಥಾಪಕ ಶ್ರೀಧರ್, ರಾಕೇಶ್ ಅಂಗಡಿ, ಕುಮಾರ್, ನಿತ್ಯ, ಪ್ರವೀಣ್ ಕುಮಾರ್ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯ ನಿರ್ವಹಣಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.